ಹಲ್ಲು ಮತ್ತು ವಸಡುಗಳಿಂದ ರಕ್ತಸ್ತ್ರಾವ ಆದಾಗ ಅದನ್ನು ಸಾಮಾನ್ಯವಾಗಿ ಯಾರೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಆದರೆ ಇದು ಕೆಲವೊಂದು ಗಂಭೀರ ಕಾಯಿಲೆಗಳ ಲಕ್ಷಣವೇ ಆಗಿರುತ್ತದೆ.
ಹಲ್ಲುಜ್ಜುವಾಗ ಒಸಡುಗಳಿಂದ ರಕ್ತಸ್ರಾವವಾಗುವುದನ್ನು ಜನರು ನಿರ್ಲಕ್ಷಿಸುವುದೇ ಹೆಚ್ಚು. ಸಣ್ಣ ಸಮಸ್ಯೆ ಎಂದು ಅಸಡ್ಡೆ ತೋರಿದರೆ ಅದೇ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಒಮ್ಮೊಮ್ಮೆ ವಸಡುಗಳಲ್ಲಿ ರಕ್ತಸ್ರಾವವಾದರೆ ಅದು ಅಪಾಯಕಾರಿಯಲ್ಲ. ಆದರೆ ಪದೇ ಪದೇ ಹೀಗಾಗುತ್ತಿದ್ದರೆ ಅದು ಎಚ್ಚರಿಕೆಯ ಗಂಟೆ.
ಒಸಡುಗಳಿಂದ ರಕ್ತಸ್ರಾವವು ಜಿಂಗೈವಿಟಿಸ್ ಸಮಸ್ಯೆಯಿಂದ ಉಂಟಾಗಬಹುದು. ಈ ಸ್ಥಿತಿಯಲ್ಲಿ, ಹಲ್ಲುಗಳ ಮೇಲೆ ಸಂಗ್ರಹವಾಗುವ ಪ್ಲೇಕ್ ಮತ್ತು ಬ್ಯಾಕ್ಟೀರಿಯಾಗಳಿಂದ ಒಸಡುಗಳಲ್ಲಿ ಊತ ಮತ್ತು ಸೋಂಕಿನಂತಹ ಲಕ್ಷಣಗಳು ಕಂಡುಬರುತ್ತವೆ.
ಇದು ಒಸಡುಗಳು ಮತ್ತು ದವಡೆಯ ಮೂಳೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಹಲ್ಲುಗಳ ಬೇರುಗಳು ದುರ್ಬಲಗೊಳ್ಳುತ್ತವೆ. ಈ ಸ್ಥಿತಿಯು ಒಸಡುಗಳಿಂದ ನಿರಂತರ ರಕ್ತಸ್ರಾವ, ದುರ್ವಾಸನೆ, ಹಲ್ಲು ಸಡಿಲವಾಗುವುದು ಗಮುಂತಾದ ಲಕ್ಷಣಗಳೊಂದಿಗೆ ಗೋಚರಿಸುತ್ತದೆ.
ಕೆಲವೊಮ್ಮೆ ವಿಟಮಿನ್ ಕೊರತೆಯಿಂದಲೂ ಒಸಡುಗಳಿಂದ ರಕ್ತಸ್ರಾವವಾಗುತ್ತದೆ. ಇದಕ್ಕೆ ವಿಟಮಿನ್ ಸಿ ಮತ್ತು ವಿಟಮಿನ್ ಕೆ ಕೊರತೆ ವಿಶೇಷವಾಗಿ ಕಾರಣವಾಗಿರುತ್ತವೆ.
ಗರ್ಭಾವಸ್ಥೆಯಲ್ಲಿ, ಋತುಚಕ್ರದ ಸಮಯದಲ್ಲಿ ಅಥವಾ ಋತುಬಂಧದ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನುಗಳ ಬದಲಾವಣೆ ಕಂಡು ಬರುತ್ತದೆ. ಇದು ಒಸಡುಗಳು ಊದಿಕೊಂಡು ರಕ್ತಸ್ರಾವಕ್ಕೆ ಕಾರಣವಾಗಬಹುದು.
ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.