ತುಪ್ಪ

ಬೆಣ್ಣೆಯು ಚರ್ಮ ಮತ್ತು ಕೂದಲಿನ ಕೆಲ ಸಮಸ್ಯೆಗಳನ್ನು ನಿವಾರಿಸುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಬೆಣ್ಣೆ, ತುಪ್ಪದಲ್ಲಿ ಕಲಬೆರಕೆ ಇರುವುದರಿಂದ ಮನೆಯಲ್ಲಿಯೇ ಇವುಗಳನ್ನು ತಯಾರಿಸಿ.

Bhavishya Shetty
Jan 22,2023

ತುಪ್ಪ

ಮನೆಯಲ್ಲಿ ಬೆಣ್ಣೆಯನ್ನು ತಯಾರಿಸಲು ಮೊದಲು ಹಾಲಿನಿಂದ ಕೆನೆ ತೆಗೆದುಕೊಂಡು ಅದನ್ನು ಪ್ರತ್ಯೇಕ ಪಾತ್ರೆಯಲ್ಲಿ ಇರಿಸಿ.

ತುಪ್ಪ

4 ರಿಂದ 5 ದಿನಗಳ ಕೆನೆ ಸಂಗ್ರಹಿಸಿ ಅದನ್ನು ಪ್ರತಿದಿನ ಫ್ರಿಜ್ ನಲ್ಲಿ ಇರಿಸಿ. ಕ್ರೀಂನ ಪ್ರಮಾಣ ಹೆಚ್ಚಾದಾಗ, ಅದನ್ನು ಮತ್ತೆ ಹೊರತೆಗೆದು 4 ರಿಂದ 5 ಗಂಟೆಗಳ ಕಾಲ ಬಿಡಿ.

ತುಪ್ಪ

ಕ್ರೀಮ್ ಅನ್ನು ಸರಿಯಾಗಿ ಮಿಶ್ರಣ ಮಾಡಿ, ಅದರಿಂದ ಮೃದುವಾದ ಪೇಸ್ಟ್ ಮಾಡಿ. ನೀವು ಕೆನೆ ಮಂಥನ ಮಾಡಿದ ಬಳಿಕ ಬೆಣ್ಣೆಯ ಉಂಡೆಯನ್ನು ಮಾಡಿ, ಅದನ್ನು ಪಕ್ಕಕ್ಕೆ ಇರಿಸಿ. ಅದನ್ನು ತಣ್ಣನೆಯ ನೀರಿನಲ್ಲಿ ಹಾಕಿ.

ತುಪ್ಪ

ಈಗ ತಣ್ಣೀರಿನಿಂದ ಬೆಣ್ಣೆಯನ್ನು ತೆಗೆದುಕೊಂಡು ಅದನ್ನು ಪ್ರತ್ಯೇಕ ಪಾತ್ರೆಯಲ್ಲಿ ಇರಿಸಿ, ಬಳಿಕ ಬಿಸಿ ಮಾಡಿ. ಪ್ಯಾನ್ ಬಿಸಿಯಾಗಲು ಪ್ರಾರಂಭಿಸಿದಾಗ, ಬೆಣ್ಣೆಯಿಂದ ತುಪ್ಪವು ಹೊರಬರಲು ಪ್ರಾರಂಭಿಸುತ್ತದೆ.

ತುಪ್ಪ

ಬೆಣ್ಣೆಯಿಂದ ತುಪ್ಪ ಸಂಪೂರ್ಣವಾಗಿ ಬೇರ್ಪಟ್ಟಾಗ, ಅದನ್ನು ಫಿಲ್ಟರ್ ಮಾಡಿ, ಪ್ರತ್ಯೇಕ ಪಾತ್ರೆಯಲ್ಲಿ ಇರಿಸಿ.

VIEW ALL

Read Next Story