ಹಣ್ಣು, ಸಿಪ್ಪೆಗಿಂತ ಪ್ರಯೋಜನಕಾರಿ ದಾಳಿಂಬೆ ಎಲೆ: ಈ ಕಾಯಿಲೆಗಳಿಗೆ ಇದು ರಾಮಬಾಣ

Bhavishya Shetty
Apr 08,2024

ಔಷಧೀಯ ಗುಣಗಳು

ದಾಳಿಂಬೆಯಂತೆಯೇ ಇದರ ಎಲೆಗಳನ್ನು ಸಹ ಅನೇಕ ರೋಗಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇದರಲ್ಲಿ ಇರುವ ಔಷಧೀಯ ಗುಣಗಳು ಅನೇಕ ದೈಹಿಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

ತ್ವಚೆಯ ಆರೋಗ್ಯ

ದಾಳಿಂಬೆಯು ದೇಹಕ್ಕೆ ಮತ್ತು ಒಟ್ಟಾರೆ ಆರೋಗ್ಯಕ್ಕೆ ಉತ್ತಮವಾದ ಹಣ್ಣಾಗಿದೆ. ಇನ್ನು ಇದರ ಸಿಪ್ಪೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರ ಜೊತೆಗೆ ಕೂದಲು ಮತ್ತು ತ್ವಚೆಯ ಆರೋಗ್ಯ ಕಾಪಾಡಲು ಕೂಡ ಬಳಸಲಾಗುತ್ತದೆ.

ಆರೋಗ್ಯ ಪ್ರಯೋಜನ

ದಾಳಿಂಬೆ ಹಣ್ಣಿನ ಹೊರತಾಗಿ, ಅದರ ಎಲೆಗಳು, ತೊಗಟೆ, ಬೀಜಗಳು, ಬೇರುಗಳು ಮತ್ತು ಅದರ ಹೂವುಗಳು ಸಹ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ.

ತೂಕ ಕಡಿಮೆ

ದಾಳಿಂಬೆ ಎಲೆಗಳಿಂದ ಟೀ ತಯಾರಿಸಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ತೂಕವನ್ನು ಕಡಿಮೆ ಮಾಡುವುದರ ಜೊತೆಗೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ಈ ಚಹಾವು ಪರಿಣಾಮಕಾರಿಯಾಗಿದೆ.

ಕೆಮ್ಮಿನ ಸಮಸ್ಯೆ

ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಹೆಚ್ಚಾಗಿ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುತ್ತಾರೆ. ನೆಗಡಿ ಮತ್ತು ಕೆಮ್ಮಿನ ಸಮಸ್ಯೆ ಇದ್ದರೆ ದಾಳಿಂಬೆ ಎಲೆಗಳ ಕಷಾಯ ಮಾಡಿ ಕುಡಿಯಬಹುದು.

ಕಿವಿ ನೋವಿನ ಸಮಸ್ಯೆ

ಕೆಲವೊಮ್ಮೆ ಕಿವಿಗಳಲ್ಲಿ ತುರಿಕೆಯಿಂದಾಗಿ ಕಿವಿ ನೋವಿನ ಸಮಸ್ಯೆ ಪ್ರಾರಂಭವಾಗುತ್ತದೆ. ಹಿಂದಿನ ಕಾಲದಲ್ಲಿ ಕಿವಿಯಲ್ಲಿ ತುರಿಕೆ ಬರದಂತೆ ಸಾಸಿವೆ ಎಣ್ಣೆಯನ್ನು ಬಳಸುತ್ತಿದ್ದರೂ ಈಗ ಮಾರುಕಟ್ಟೆಯಲ್ಲಿ ಸಿಗುವ ಸಾಸಿವೆ ಎಣ್ಣೆಯಲ್ಲಿ ಕಲಬೆರಕೆ ಶುರುವಾಗಿದೆ.

ಶೀಘ್ರ ಪರಿಹಾರ

ಒಂದು ವೇಳೆ ಸಾಸಿವೆ ಎಣ್ಣೆಯನ್ನು ಬಳಸುವುದಾದರೆ, ಅದಕ್ಕೆ ಕೆಲವು ಹನಿ ದಾಳಿಂಬೆ ಎಲೆ ರಸವನ್ನು ಸೇರಿಸಿ. ಇದು ನಿಮ್ಮ ಕಿವಿ ನೋವಿನ ಸಮಸ್ಯೆಗೆ ಶೀಘ್ರ ಪರಿಹಾರ ನೀಡುತ್ತದೆ.

ಸೂಚನೆ:

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

VIEW ALL

Read Next Story