ಮೆಹೆಂದಿ ಸೊಪ್ಪು

ಮದರಂಗಿ ಅಥವಾ ಮೆಹೆಂದಿ ಸೊಪ್ಪಿನ ಆರೋಗ್ಯ ಪ್ರಯೋಜನಗಳ ಬಗ್ಗೆ ಇಂದು ಮಾಹಿತಿ ನೀಡಲಿದ್ದೇವೆ.

Bhavishya Shetty
Apr 03,2023

ಮೆಹೆಂದಿ ಸೊಪ್ಪು

ಮೆಹೆಂದಿ ಎಲೆಯನ್ನು ಪೇಸ್ಟ್ ಆಗಿ ಅಥವಾ ಒಣಗಿದ ಎಲೆಗಳನ್ನು ಪುಡಿಮಾಡಿ, ತಲೆಗೆ, ಕೈಗಳಿಗೆ, ಉಗುರುಗಳಿಗೆ ಮತ್ತು ಪಾದಗಳಿಗೆ ಹಚ್ಚಲಾಗುತ್ತದೆ.

ಮೆಹೆಂದಿ ಸೊಪ್ಪು

ಮದುವೆ ಶುಭ ಸಮಾರಂಭದಲ್ಲಿ ಬಹಳಷ್ಟು ಬಳಕೆ ಮಾಡಲಾಗುತ್ತದೆ. ಭಾರತದಲ್ಲಿ ಮೆಹೆಂದಿಗೆ ಮಹತ್ವವನ್ನು ನೀಡಲಾಗಿದೆ.

ಮೆಹೆಂದಿ ಸೊಪ್ಪು

ಇದು ಕೇವಲ ಅಲಂಕಾರ, ಶೃಂಗಾರಕ್ಕಲ್ಲ, ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಮೆಹೆಂದಿ ಎಲೆಗಳು ಕಾಮಾಲೆ, ಚರ್ಮ ರೋಗಗಳು ಮತ್ತು ಸಿಡುಬು ರೋಗಗಳಿಗೆ ಪರಿಹಾರ ನೀಡುತ್ತದೆ.

ಮೆಹೆಂದಿ ಸೊಪ್ಪು

ಮೆಹೆಂದಿ ಗೊನೊರಿಯಾ ಮತ್ತು ಹರ್ಪಿಸ್ ಸೋಂಕಿನಂತಹ ಸಮಸ್ಯೆಗಳಿಗೆ ಪರಿಹಾರವಾಗಿದೆ. ಇದರ ಬೇರುಗಳ ನೀರನ್ನು ನೋಯುತ್ತಿರುವ ಕಣ್ಣುಗಳಿಗೆ ಹಚ್ಚಿದರೆ, ಶೀಘ್ರ ಪರಿಹಾರ ಕಂಡುಕೊಳ್ಳಬಹುದು.

ಮೆಹೆಂದಿ ಸೊಪ್ಪು

ತಲೆನೋವು ತೊಡೆದುಹಾಕಲು ಮೆಹೆಂದಿ ನಿಮಗೆ ಸಹಾಯ ಮಾಡುತ್ತದೆ. ಪಿತ್ತದಿಂದ ಉಂಟಾದ ತಲೆನೋವಿಗೆ ಇದು ಆಯುರ್ವೇದವಾಗಿ ಕೆಲಸ ಮಾಡುತ್ತದೆ.

ಮೆಹೆಂದಿ ಸೊಪ್ಪು

ಇನ್ನು ಕರುಳಿನಲ್ಲಿ ನೀರಿನ ದ್ರವವನ್ನು ಉಳಿಸಿಕೊಳ್ಳುವ ಮೂಲಕ ಜೀರ್ಣಕ್ರಿಯೆ ಸುಧಾರಿಸಲು ಇದನ್ನು ಕೆಲ ದೇಶಗಳಲ್ಲಿ ಕಷಾಯವನ್ನಾಗಿ ಮಾಡಿ ಕುಡಿಯುತ್ತಾರೆ. ಇದು ಅತಿಸಾರವನ್ನು ಸಹ ತಡೆಯುತ್ತದೆ.


(ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಜ್ಞಾನ ಮತ್ತು ಮನೆಮದ್ದುಗಳಾಗಿವೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ)

VIEW ALL

Read Next Story