ಜೀವನ ಶೈಲಿ

ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳ ಅಗತ್ಯವಿರುತ್ತದೆ.

Puttaraj K Alur
Jul 06,2023

ನಿಯಮಿತ ವ್ಯಾಯಾಮ

ದಿನನಿತ್ಯ ನಿಯಮಿತ ವ್ಯಾಯಾಮ ಮಾಡುವುದರಿಂದ ನಮ್ಮ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ.

ವಿಶ್ರಾಂತಿ ಮತ್ತು ನಿದ್ರೆ

ವಿಶ್ರಾಂತಿ ಮತ್ತು ನಿದ್ರೆಗೆ ಒತ್ತು ನೀಡುವುದರಿಂದ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ.

ಧ್ಯಾನ ಮತ್ತು ಓದುವ ಹವ್ಯಾಸ

ಧ್ಯಾನ ಮತ್ತು ಓದುವ ಹವ್ಯಾಸವನ್ನು ರೂಢಿಸಿಕೊಂಡರೆ ಮಾನಸಿಕ ಸ್ಥಿತಿಗತಿ ಚೆನ್ನಾಗಿರುತ್ತದೆ.

ಧ್ಯಾನದಂತಹ ಚಟುವಟಿಕೆ

ಸ್ವ-ಆರೈಕೆಯ ಅಭ್ಯಾಸ ಮತ್ತು ಧ್ಯಾನದಂತಹ ಚಟುವಟಿಕೆಗಳಿಂದ ಒತ್ತಡವನ್ನು ನಿಯಂತ್ರಿಸಬಹುದು.

ಬಂಧು-ಬಳಗದ ಜೊತೆ ಸಂಪರ್ಕ

ಬಂಧು-ಬಳಗದವರ ಜೊತೆ ಸಂಪರ್ಕದಲ್ಲಿರುವುದರಿಂದಲೂ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ.

ಸಕಾರಾತ್ಮಕ ದೃಷ್ಟಿಕೋನ

ಜೀವನದ ಬಗ್ಗೆ ಯಾವಾಗಲೂ ಸಕಾರಾತ್ಮಕ ದೃಷ್ಟಿಕೋನವನ್ನು ಹೊಂದಿರುವುದು.

ಆತ್ಮವಿಶ್ವಾಸ ಮತ್ತು ಧೈರ್ಯ

ಜೀವನದಲ್ಲಿ ಬರುವ ಕಷ್ಟಗಳನ್ನು ಸ್ಥಿರ ಮನಸ್ಸಿನಿಂದ ಎದುರಿಸುವ ಆತ್ಮವಿಶ್ವಾಸ ಮತ್ತು ಧೈರ್ಯ ಹೊಂದುವುದು.

VIEW ALL

Read Next Story