ಕೆಲವರಿಗೆ ಒತ್ತಡ, ಚಿಂತೆ, ಅನಾರೋಗ್ಯಕರ ಜೀವನ ಶೈಲಿಯ ಕಾರಣದಿಂದ ರಾತ್ರಿ ಎಷ್ಟು ಹೊತ್ತಾದರೂ ನಿದ್ದೆ ಬರುವುದಿಲ್ಲ.
ಕೆಲವರು ರಾತ್ರಿ ಮಗ್ಗುಲು ಬದಲಿಸುವ ಮೂಲಕವೇ ಕಾಲ ಕಳೆಯುತ್ತಾರೆ ವಿನಃ ನಿದ್ದೆ ಬರುವುದಿಲ್ಲ.
ರಾತ್ರಿ ಹೊತ್ತಿನಲ್ಲಿ ಸರಿಯಾಗಿ ನಿದ್ದೆ ಆಗಿಲ್ಲ ಎಂದಾದರೆ ದಿನವೆಲ್ಲಾ ಗೊಂದಲದ ಗೂಡಾಗಿಯೇ ಇರುವುದು.
ಚಕ್ಕೆ ಅಡುಗೆಯ ರುಚಿಯನ್ನು ಹೆಚ್ಚಿಸುವ ಮಸಾಲೆ. ಜೊತೆಗೆ ಇದರ ಸೇವನೆ ಸುಖಕರ ನಿದ್ದೆಗೂ ಕಾರಣವಾಗುತ್ತದೆ.
ಹಾಲಿಗೆ ಚಕ್ಕೆಯ ಪುಡಿಯನ್ನು ಬೆರೆಸಿ ಸೇವಿಸಿದರೆ ರಾತ್ರಿ ಗಾಢ ನಿದ್ದೆ ಬರುತ್ತದೆ.
ಚಕ್ಕೆಯಲ್ಲಿ ಆಂಟಿ ಆಕ್ಸಿಡೆಂಟ್, ಆಂಟಿ ಇಂಫ್ಲಮೇಟರಿ, ಆಂಟಿ ಮೈಕ್ರೋಬಯಲ್ ಗುಣ ಇರುತ್ತದೆ. ಇವೆಲ್ಲವೂ ಗಾಢ ನಿದ್ದೆಗೆ ಕಾರಣವಾಗುವ ಅಂಶಗಳು.
ಚಕ್ಕೆ ಜೀರ್ಣಕ್ರಿಯೆಯನ್ನು ಸುಧಾರಿಸುವ ಕೆಲಸವನ್ನೂ ಮಾಡುತ್ತದೆ. ಇದರಿಂದ ಗ್ಯಾಸ್, ಆಸಿಡಿಟಿ, ಮಲಬದ್ದತೆ ಮುಂತಾದ ಸಮಸ್ಯೆ ದೂರವಾಗುವುದು.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದಿನ ಆಧಾರದಲ್ಲಿ ಬರೆಯಲಾಗಿದೆ. ಇದನ್ನು ಜೀ ನ್ಯೂಸ್ ಅನುಮೋದಿಸುವುದಿಲ್ಲ.