ದುಬಾರಿ ದುನಿಯಾದಲ್ಲಿ ಹಣ ಉಳಿತಾಯ ಮಾಡುವುದೇ ದೊಡ್ಡ ಸವಾಲು. ಹಣ ಉಳಿತಾಯಕ್ಕೆ ಇಲ್ಲಿವೆ ನೋಡಿ ಉಪಯುಕ್ತ ಸಲಹೆಗಳು.
ʼಹಾಸಿಗೆ ಇದ್ದಷ್ಟೇ ಕಾಲು ಚಾಚುʼ ಗಾದೆ ಮಾತಿನಂತೆ ಪ್ರತಿಯೊಬ್ಬರೂ ಅನಗತ್ಯ ಖರ್ಚಿಗೆ ಕಡಿವಾಣ ಹಾಕಬೇಕು.
ಪ್ರತಿಯೊಬ್ಬರೂ ಚೌಕಾಶಿ ಮಾಡುವುದನ್ನ ಕಲಿಯಬೇಕು. ನೀವು ಏನೇ ಖರೀದಿಸುವುದಿದ್ದರೂ ಮಾರಾಟಗಾರರು ಹೇಳಿದಷ್ಟು ಮೊತ್ತವನ್ನು ಕಣ್ಣುಮುಚ್ಚಿ ನೀಡಬಾರದು.
ಯಾರೇ ಆಗಲಿ ಇಂತಿಷ್ಟೇ ಖರ್ಚು ಮಾಡಬೇಕು ಅನ್ನೋದರ ಬಗ್ಗೆ ಮೊದಲೇ ನಿಗದಿಪಡಿಸಿ.
ಕಡಿಮೆ ಬಾಡಿಗೆ ಮತ್ತು ಜೀವನ ವೆಚ್ಚ ಕಡಿಮೆ ಇರುವ ಸ್ಥಳಕ್ಕೆ ಶಿಫ್ಟ್ ಆಗುವುದು ತುಂಬಾ ಉತ್ತಮ.
ನೀವು ದುಡಿದ ಹಣದ ಒಂದಷ್ಟು ಭಾಗವನ್ನ ಹೂಡಿಕೆ ಮಾಡಬೇಕು. SIP ಹೂಡಿಕೆಯ ಕುರಿತು ಗಮನ ನೀಡಬೇಕು.
ಆದಷ್ಟು ಸಾರ್ವಜನಿಕ ಸಾರಿಗೆಯನ್ನ ಬಳಕೆ ಮಾಡಿ, ಮನೆಯಲ್ಲಿಯೇ ತಯಾರಿಸಿದ ಆಹಾರ ಸೇವಿಸಿ.
ಏನಾದರೂ ಖರೀದಿಸುವ ಮೊದಲು "ಇದು ನಿಜಕ್ಕೂ ನಮಗೆ ಅಗತ್ಯವಿದೆಯೇ?" ಎಂದು ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಿರಿ.