ಅನೇಕ ಜನರಿಗೆ ಮೋಸಂಬಿ ಜ್ಯೂಸ್ ಎಂದರೆ ಇಷ್ಟವಾಗುತ್ತದೆ. ಇದು ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ತರುತ್ತದೆ. ದೇಹವನ್ನು ತಂಪಾಗಿಸಲು, ದಿನವಿಡೀ ತೇವಾಂಶದಿಂದ ಮತ್ತು ತಾಜಾವಾಗಿರಲು ಸಹಾಯ ಈ ಜ್ಯೂಸ್ ಸಹಾಯ ಮಾಡುತ್ತದೆ.
ವಿಟಮಿನ್ ಸಿ, ಪೊಟ್ಯಾಸಿಯಮ್, ಸತು, ಕ್ಯಾಲ್ಸಿಯಂ, ಫೈಬರ್, ತಾಮ್ರ ಮತ್ತು ಕಬ್ಬಿಣದ ಅಂಶಗಳು ಈ ಹಣ್ಣಿನಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ದೇಹವನ್ನು ಒಳಗಿನಿಂದ ಬಲವಾಗಿಡಲು ಸಹಾಯ ಮಾಡುತ್ತದೆ
ನೈಸರ್ಗಿಕ ವಿಧಾನಗಳ ಮೂಲಕ ತೂಕ ಇಳಿಸಿಕೊಳ್ಳಲು ಬಯಸಿದರೆ ಮೂಸಂಬಿ ಜ್ಯೂಸ್ ನಿಮಗೆ ಸಹಾಯ ಮಾಡುತ್ತದೆ. ಬೆಳಿಗ್ಗೆ ನೀರು ಮತ್ತು ಜೇನುತುಪ್ಪದೊಂದಿಗೆ ಮೂಸಂಬಿ ಜ್ಯೂಸ್ ಕುಡಿದರೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮೂಸಂಬಿ ಜ್ಯೂಸ್‌ನಲ್ಲಿ ಹೇರಳವಾಗಿರುವ ವಿಟಮಿನ್ ಸಿ ದೇಹವು ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು, ಖಾಲಿ ಹೊಟ್ಟೆಯಲ್ಲಿ ಬೆಳಿಗ್ಗೆ ಒಂದು ಲೋಟ ಮೂಸಂಬಿ ಜ್ಯೂಸ್ ಕುಡಿಯಬಹುದು.
ಈ ಹಣ್ಣುಗಳಲ್ಲಿ ಇರುವ ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್‌ಗಳು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಈ ರಸವನ್ನು ಸೇವಿಸುವುದರಿಂದ ಚರ್ಮದ ಕಲೆಗಳು ಮತ್ತು ಮೊಡವೆಗಳ ಸಮಸ್ಯೆ ನಿವಾರಣೆಯಾಗುತ್ತದೆ.
ಮಾನಸಿಕ ಸಮಸ್ಯೆಗಳ ಚಿಕಿತ್ಸೆಯಲ್ಲಿ ಮೂಸಂಬಿ ಜ್ಯೂಸ್ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ತಲೆನೋವು, ತಲೆತಿರುಗುವಿಕೆ ಮತ್ತು ವಾಕರಿಕೆಯಿಂದ ಬಳಲುತ್ತಿದ್ದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂಸಂಬಿ ಜ್ಯೂಸ್ ಸೇವಿಸಿ.
ಮೂಸಂಬಿಯಲ್ಲಿರುವ ಫ್ಲೇವನಾಯ್ಡ್ʼಗಳು ಜೀರ್ಣಕ್ರಿಯೆಯನ್ನು ಸುಧಾರಿಸುವ ಮೂಲಕ ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳಂತಹ ಜೀರ್ಣಕಾರಿ ಸಮಸ್ಯೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ದೇಹದಿಂದ ಮಲಬದ್ಧತೆಗೆ ಕಾರಣವಾಗುವ ಹಾನಿಕಾರಕ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.