ವಿಶೇಷ ಔಷಧೀಯ ಗುಣ

ಬಹಳ ಪ್ರಾಚೀನ ಕಾಲದಿಂದಲೂ ನುಗ್ಗೆ ಸೊಪ್ಪು ವಿಶೇಷ ಔಷಧೀಯ ಗುಣಗಳಿಂದ ಆಯುರ್ವೇದಲ್ಲಿ ಮಹತ್ವ ಪಡೆದುಕೊಂಡಿದೆ.

Puttaraj K Alur
Mar 28,2025

ಆರೋಗ್ಯಕ್ಕೆ ಸಹಕಾರಿ

ನುಗ್ಗೆ ಸೊಪ್ಪಿನಲ್ಲಿ ಬಹಳಷ್ಟು ಆರೋಗ್ಯಯುತ ಅಂಶಗಳಿದ್ದು, ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಪೋಷಕಾಂಶಗಳಿಂದ ಸಮೃದ್ಧ

ನುಗ್ಗೆ ಕಾಯಿ ಮತ್ತು ನುಗ್ಗೆ ಸೊಪ್ಪು ಹಲವು ಪೋಷಕಾಂಶಗಳನ್ನು ಹೊಂದಿರುವ ತರಕಾರಿ ಮತ್ತು ಸೊಪ್ಪುಗಳಲ್ಲಿ ಒಂದಾಗಿದೆ.

ವಿಟಮಿನ್ & ಪ್ರೋಟೀನ್

ನುಗ್ಗೆ ಸೊಪ್ಪಿನಲ್ಲಿ ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಎ, ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಮತ್ತು ಅಮೈನೋ ಆಮ್ಲಗಳು ಸಮೃದ್ಧವಾಗಿದೆ.

ಆಂಟಿವೈರಲ್ ಗುಣ

ನುಗ್ಗೆ ಆಂಟಿಫಂಗಲ್, ಆಂಟಿವೈರಲ್, ಖಿನ್ನತೆ ಸೇರಿದಂತೆ ಉರಿಯೂತಗಳನ್ನು ಶಮನ ಮಾಡುವ ಆರೋಗ್ಯಕರ ಗುಣವನ್ನು ಹೊಂದಿದೆ.

ಕೂದಲಿನ ಆರೋಗ್ಯ

ನುಗ್ಗೆ ಸೊಪ್ಪು ಆರೋಗ್ಯಕ್ಕೆ ಮಾತ್ರವಲ್ಲ. ಇದರ ಎಣ್ಣೆ ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ.

ರೋಗನಿರೋಧಕ ಶಕ್ತಿ

ನುಗ್ಗೆ ಸೊಪ್ಪಿನಲ್ಲಿರುವ ಸಮೃದ್ಧ ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿ ಮತ್ತು ಲೈಂಗಿಕ ಶಕ್ತಿ ಹೆಚ್ಚಿಸುವಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ.

ಮಧುಮೇಹಿಗಳಿಗೆ ಪ್ರಯೋಜನಕಾರಿ

ನುಗ್ಗೆ ಸೊಪ್ಪು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳ್ಳುತ್ತದೆ. ಮಧುಮೇಹಿಗಳಿಗೆ ಹೆಚ್ಚು ನುಗ್ಗೆ ಸೊಪ್ಪಿನ ಬಳಕೆ ಮಾಡಲು ವೈದ್ಯರು ಸಲಹೆ ನೀಡುತ್ತಾರೆ.

VIEW ALL

Read Next Story