ನುಗ್ಗೆಕಾಯಿ ಮತ್ತದರ ಸೊಪ್ಪಿನಲ್ಲಿ ಅಪಾರ ಪ್ರಮಾಣದ ಪೋಷಕಾಂಶಗಳಿದ್ದು, ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ.
ನುಗ್ಗೆಸೊಪ್ಪಿನಲ್ಲಿ ಹಾಲಿಗಿಂತಲೂ ಹೆಚ್ಚು ಕ್ಯಾಲ್ಸಿಯಂ ಇದ್ದು, ಕ್ಯಾರೆಟ್ಗಿಂತ ಹತ್ತು ಪಟ್ಟು ವಿಟಮಿನ್ ʼಎʼ ಜಾಸ್ತಿಯಿದೆ.
ವಿಟಮಿನ್ C, E ಕ್ಯಾಲ್ಸಿಯಂ, ಪೊಟ್ಯಾಸಿಯಂ & ಕಬ್ಬಿಣ, ಪೋಷಕಾಂಶಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.
ಖಾಲಿ ಹೊಟ್ಟೆಯಲ್ಲಿ ನುಗ್ಗೆ ಸೊಪ್ಪಿನ ನೀರು ಕುಡಿಯುವುದರಿಂದ ಅದ್ಭುತ ಆರೋಗ್ಯ ಪ್ರಯೋಜನಗಳು ಸಿಗುತ್ತವೆ.
ಇದು ಮೂಳೆ ನಷ್ಟ ತಡೆಯಲು ಸಹಕಾರಿಯಾಗಿದ್ದು, ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡುತ್ತದೆ.
ನುಗ್ಗೆ ಸೊಪ್ಪಿನ ನೀರು ಕುಡಿದರೆ ಚಯಾಪಚಯ ಸುಧಾರಿಸಲು ಸಹಾಯ ಮಾಡುತ್ತದೆ & ತೂಕ ನಷ್ಟಕ್ಕೆ ಸಹಕಾರಿ.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರಿಂದ ಇದು ಮಧುಮೇಹ ರೋಗಿಗಳಿಗೆ ಅತ್ಯುತ್ತಮ ಆಹಾರವಾಗಿದೆ.
ವಿಟಮಿನ್ ʼಇʼ ಸಮೃದ್ಧವಾಗಿರುವ ನುಗ್ಗೆ ಸೊಪ್ಪಿನ ನೀರು ಚರ್ಮಕ್ಕೆ ಮತ್ತು ರಕ್ತಹೀನತೆಗೆ ಚಿಕಿತ್ಸೆಗೆ ಸಹಾಯ ಮಾಡುತ್ತದೆ.