ಮುಂಜಾನೆ ಕಾಡುವ ತಲೆನೋವಿಗೆ ಅತ್ಯುತ್ತಮ ಪರಿಹಾರ

Yashaswini V
Mar 18,2024

ಮುಂಜಾನೆ ತಲೆನೋವು

ನಮ್ಮಲ್ಲಿ ಕೆಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ತಲೆ ಹಿಡಿದುಕೊಂಡಂತೆ ಭಾಸವಾಗುತ್ತದೆ. ಇದು ಸಾಮಾನ್ಯ ತಲೆನೋವಾಗಿರಬಹುದು. ಇಲ್ಲವೇ, ಮೈಗ್ರೆಸ್, ಸೈನಸ್ ಸಮಸ್ಯೆಯೂ ಆಗಿರಬಹುದು.

ತಲೆನೋವಿಗೆ ಮನೆಮದ್ದು

ಆದರೆ, ಈ ತಲೆನೋವಿಗೆ ಆರಂಭದಲ್ಲೇ ಸೂಕ್ತ ಚಿಕಿತ್ಸೆ ನೀಡದಿದ್ದರೆ ಭವಿಷ್ಯದಲ್ಲಿ ಇದು ಗಂಭೀರ ಕಾಯಿಲೆಗಳ ಅಪಾಯವನ್ನೂ ಹೆಚ್ಚಿಸಬಹುದು. ಇಂತಹ ತಲೆ ನೋವಿಗೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ಉತ್ತಮ ಎಂದು ಸಾಬೀತುಪಡಿಸಬಹುದು. ಅವುಗಳೆಂದರೆ...

ಬೆಳ್ಳುಳ್ಳಿ

ಒಂದೆರಡು ಬೆಳ್ಳುಳ್ಳಿ ಎಸಳನ್ನು ಜಜ್ಜಿ ಅದರಲ್ಲಿ ಸ್ವಲ್ಪ ಉಪ್ಪು ಬೆರೆಸಿ ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಮುಂಜಾನೆ ತಲೆನೋವಿಗೆ ಸುಲಭ ಪರಿಹಾರ ಪಡೆಯಬಹುದು.

ಸೇಬು

ಬೆಳಿಗ್ಗೆ ಹೊತ್ತು ಸೇಬಿಗೆ ಸ್ವಲ್ಪ ಉಪ್ಪು ಸವರಿ ತಿನ್ನುವುದರಿಂದಲೂ ಈ ಸಮಸ್ಯೆಗೆ ಪರಿಹಾರ ಪಡೆಯಬಹುದು.

ವ್ಯಾಯಾಮ

ನಿತ್ಯ ಮುಂಜಾನೆ ಧ್ಯಾನ, ವ್ಯಾಯಾಮ ಮಾಡುವುದರಿಂದಲೂ ತಲೆನೋವಿನಿಂದ ಸುಲಭ ಪರಿಹಾರ ಪಡೆಯಬಹುದು.

ದಾಲ್ಚಿನ್ನಿ ಪೇಸ್ಟ್

ದಾಲ್ಚಿನ್ನಿಯನ್ನು ಪುಡಿ ಮಾಡಿ ಸ್ವಲ್ಪ ನೀರು ಬೆರೆಸಿ ಇದನ್ನು ಹಣೆಗೆ ಹಚ್ಚುವುದರಿಂದಲೂ ತಲೆನೋವಿನಿಂದ ಪರಿಹಾರ ದೊರೆಯುತ್ತದೆ.

ಸೂಚನೆ

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story