ಹಣ್ಣುಗಳ ಸೇವನೆ ಆರೋಗ್ಯಕ್ಕೆ ಲಾಭದಾಯಕವಾಗಿರುತ್ತದೆ.ಇದರಿಂದ ಶರೀರಕ್ಕೆ ಅಗತ್ಯವಿರುವ ಪೋಷಕ ತತ್ವ ಸಿಗುತ್ತದೆ.
ಆದ್ರೆ ಕೆಲವು ಹಣ್ಣುಗಳನ್ನು ರಾತ್ರಿ ಹೊತ್ತಿನಲ್ಲಿ ಸೇವಿಸಬಾರದು. ಇದರಿಂದ ದೇಹದ ಮೇಲೆ ಅಡ್ಡ ಪರಿಣಾಮ ಕಾಣಿಸಿಕೊಳ್ಳುತ್ತದೆ.
ರಾತ್ರಿ ಸಮಯದಲ್ಲಿ ಹುಳಿ ಹಣ್ಣುಗಳನ್ನು ಸೇವಿಸಬಾರದು. ಇದರಿಂದ ಅಜೀರ್ಣದಂಥಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಅನಾನಾಸಿನಲ್ಲಿ ಬ್ರೋಮೆಲೈನ್ ಹೆಸರಿನ ಕಿಣ್ವ ಅಡಗಿರುತ್ತದೆ. ಅದ್ದರಿಂದ ಇದನ್ನು ರಾತ್ರಿ ಸೇವಿಸುವುದರಿಂದ ಸಮಸ್ಯೆ ಉಂಟಾಗಬಹುದು.
ಕಲ್ಲಂಗಡಿಯಲ್ಲಿ ಹೆಚ್ಚಿನ ಪ್ರಮಾಣದ ನೀರು ಇರುತ್ತದೆ. ಇದನ್ನು ರಾತ್ರಿ ವೇಳೆ ಸೇವಿಸುವುದರಿಂದ ಪದೇ ಪದೇ ಟಾಯ್ಲೆಟ್ ಗೆ ಹೋಗುವ ಸಮಸ್ಯೆ ಎದುರಾಗಬಹುದು.
ಬಾಳೆಹಣ್ಣು ಆರೋಗ್ಯಕ್ಕೆ ಒಳ್ಳೆಯದು. ಆದರೆ ಇದನ್ನು ರಾತ್ರಿ ವೇಳೆ ಸೇವಿಸುವುದರಿಂದ ಶುಗರ್ ಸಮಸ್ಯೆ ಕಾಡಬಹುದು.
ಮಾವಿನಹಣ್ಣಿನಲ್ಲಿಯೂ ನೈಸರ್ಗಿಕ ಸಕ್ಕರೆ ಇರುತ್ತದೆ. ಇದನ್ನು ರಾತ್ರಿ ಎವಿಸಿದರೆ ರಕ್ತದ ಸಕ್ಕರೆ ಹೆಚ್ಚಾಗಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ