TV ನೋಡುತ್ತಿರುವ ವೇಳೆ ಈ ತಪ್ಪು ಮಾಡುತ್ತಿದ್ದರೆ, ನಿಧಾನವಾಗಿ ಈ ರೋಗ ಆವರಿಸಿ ಬಿಡುತ್ತದೆ

Ranjitha R K
Jun 23,2025

ಟಿವಿ ನೋಡುವಾಗ ಮಾಡುವ ತಪ್ಪು

ಟಿವಿಯ ಮುಂದೆ ಕುಳಿತರೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಒಂದರ ಮೇಲೊಂದರಂತೆ ಚಾನಲ್ ಬದಲಿಸುತ್ತಾ ಗಂಟೆ ಗಟ್ಟಲೆ ಟಿವಿ ಮುಂದೆ ಕುಳಿತುಕೊಳ್ಳುವ ಅಭ್ಯಾಸ ಹಿರಿಯರಿಂದ ಕಿರಿಯರವರೆಗೂ ಇರುತ್ತದೆ.

ಆವರಿಸುವುದು ಈ ರೋಗ

ಆದರೆ ಮನರಂಜನೆ ಪಡೆಯುತ್ತಲೇ ನಿಮಗೆ ಗೊತ್ತಿಲ್ಲದಂತೆ ನಿಧಾನವಾಗಿ ರೋಗಕ್ಕೆ ಹತೀರವಾಗುತ್ತಿರುತ್ತೀರಿ.

ಅಪಾಯ ಕಟ್ಟಿಟ್ಟ ಬುತ್ತಿ

4 ಗಂಟೆಗಳಿಗಿಂತ ಹೆಚ್ಚು ಕಾಲ ನಿರಂತರವಾಗಿ ಟಿವಿ ನೋಡುತ್ತಿದ್ದರೆ, ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ಅಧ್ಯಾಯನದಿಂದ ಸಾಬೀತಾಗಿದೆ.

ರಕ್ತ ಹೆಪ್ಪುಗಟ್ಟುವ ಸಾಧ್ಯತೆ

ಸತತ ನಾಲ್ಕು ಗಂಟೆಗಳ ಕಾಲ ಟಿವಿ ನೋಡುವವರಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ 35 ಪ್ರತಿಶತಕ್ಕಿಂತ ಹೆಚ್ಚು ಎನ್ನುವುದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ.

ವಿರಾಮ ಅಗತ್ಯ

ಟಿವಿ ನೋಡುವಾಗ ಪ್ರತೀ 30 ನಿಮಿಷಗಳ ನಂತರ ವಿರಾಮ ತೆಗೆದುಕೊಳ್ಳಬೇಕು. ಹೀಗೆ ಮಾಡಿದರೆ ರಕ್ತ ಹೆಪ್ಪುಗಟ್ಟುವಿಕೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.

ಟಿವಿ ನೋಡುತ್ತಾ ಈ ಕೆಲಸ ಮಾಡಬೇಡಿ :

ಟಿವಿ ನೋಡುವಾಗ ಫಾಸ್ಟ್ ಫುಡ್ ಅಥವಾ ಸ್ನಾಕ್ಸ್ ತಿನ್ನುವುದನ್ನು ತಪ್ಪಿಸಿ. ಇಲ್ಲವಾದಲ್ಲಿ ಸ್ಥೂಲಕಾಯ ಅಥವಾ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲಬೇಕಾದೀತು.

ರಕ್ತ ಹೆಪ್ಪುಗಟ್ಟುವಿಕೆ

ಈ ಕಾರಣದಿಂದಾಗಿ, ರಕ್ತ ಹೆಪ್ಪುಗಟ್ಟುವಿಕೆಯ ಅಪಾಯ ಕೂಡಾ ಹೆಚ್ಚಾಗುತ್ತದೆ.


ಸೂಚನೆ : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story