ಹಲ್ಲುಗಳ ಮೇಲಿನ ಪದರವನ್ನು ಎಂದರೆ ದಂತಕವಚವನ್ನು ರಕ್ಷಿಸಿ ಹಲ್ಲುಗಳನ್ನು ಗಟ್ಟಿಯಾಗಿಸಲು ಕೆಲವು ಆಹಾರಗಳು ತುಂಬಾ ಲಾಭದಾಯಕವಾಗಿದೆ.
ಹಾಲು, ಮೊಸರು ಸೇರಿದಂತೆ ಡೈರಿ ಉತ್ಪನ್ನಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಹಲ್ಲುಗಳ ಪದರ ಗಟ್ಟಿಗೊಳ್ಳುತ್ತದೆ.
ನೀವು ಮೀನು ತಿನ್ನುವವರಾದರೆ ಕೊಬ್ಬಿನ ಮೀನುಗಲಾದ ಸಾಲ್ಮನ್, ಟ್ಯೂನದಂತಹ ಆಹಾರಗಳನ್ನು ಸೇವಿಸಿದರೆ ದಂತಕವಚ ಬಲಗೊಳ್ಳುತ್ತದೆ.
ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿರುವುದರಿಂದ ಬಾಯಿಯಲ್ಲಿ ಕೆಟ್ಟ ಬ್ಯಾಕ್ಟೀರಿಯಾ ನಿವಾರಿಸಿ ವಸಡುಗಳು ಬಲಗೊಳ್ಳುತ್ತದೆ.
ಬೆರ್ರಿ ಹಣ್ಣುಗಳಲ್ಲಿ ಮಾಲಿಕ್ ಆಮ್ಲವಿದ್ದು ಇದು ಹಲ್ಲುಗಳನ್ನು ಬಿಳಿಯಾಗಿಸುತ್ತ್ದೆ. ಜೊತೆಗೆ ಹಲ್ಲಿನ ದಂತಕವಚವನ್ನು ರಕ್ಷಿಸುತ್ತದೆ.
ಕೊತ್ತಂಬರಿ ಸೊಪ್ಪು ಲಾಲಾರಸ ಉತ್ಪಾದನೆಯನ್ನು ಹೆಚ್ಚಿಸಿ ಹಲ್ಲುಗಳನ್ನು ಬಲಗೊಳಿಸುತ್ತದೆ.
ಪೋಷಕಾಂಶಗಳಲ್ಲಿ ಅಧಿಕವಾಗಿರುವ ಬಾದಾಮಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದು ಇದು ಹಲ್ಲುಗಳನ್ನು ಗಟ್ಟಿಗೊಳಿಸುತ್ತದೆ.
ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಇದು ಬಾಯಲ್ಲಿ ಕೆಟ್ಟ ಕಿಣ್ವಗಳನ್ನು ನಾಶಪಡಿಸಿ, ಹಲ್ಲುಗಳನ್ನು ಗಟ್ಟಿಗೊಳಿಸಲು ಸಹಕಾರಿ ಆಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.