ಪ್ರತಿ ತಿಂಗಳು ಪಿರಿಯಡ್ಸ್ ಆದಾಗ ಮಹಿಳೆಯರನ್ನು ಅಸಹನೀಯ ಬೆನ್ನು ನೋವು ಮತ್ತು ಸೆಳೆತಗಳು ಕಾಡುತ್ತವೆ. ಈ ಸಮಸ್ಯೆಗಳಿಂದ ಮುಕ್ತಿ ನೀಡುವ ಕೆಲ ನೈಸರ್ಗಿಕ ಮನೆಮದ್ದುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಪಿರಿಯಡ್ಸ್ ಸಮಯದಲ್ಲಿ ಬರುವ ಈ ನೋವನ್ನು ಕೇವಲ 10 ನಿಮಿಷಗಳಲ್ಲಿ ನಿಲ್ಲಿಸಬಹುದು.
ಋತುಚಕ್ರದ ಸಮಯದಲ್ಲಿ ರಕ್ತಸ್ರಾವ ಪ್ರಾರಂಭವಾದಾಗ, ನೋವು ಕೂಡ ಅದರೊಂದಿಗೆ ಪ್ರಾರಂಭವಾಗುತ್ತದೆ. ಆದರೆ ಕೆಲವು ಮಹಿಳೆಯರಲ್ಲಿ ಇದು ಋತುಚಕ್ರದ ಆರಂಭದ ಮುಂಚೆಯೇ ಶುರುವಾಗುತ್ತದೆ. ಇದನ್ನು PMS ಎಂದು ಕರೆಯಲಾಗುತ್ತದೆ.
ಕೆಲವು ಮಹಿಳೆಯರು ಬೆನ್ನು ನೋವು ಮತ್ತು ಪಿರಿಯಡ್ಸ್ನಿಂದ ಉಂಟಾಗುವ ಸೆಳೆತದಿಂದ ಪರಿಹಾರ ಪಡೆಯಲು ನೋವು ನಿವಾರಕಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಈ ಔಷಧಿಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಅವರ ಋತುಚಕ್ರ ಮತ್ತು ಅಂಡೋತ್ಪತ್ತಿ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.
ಪಿರಿಯಡ್ಸ್ ನೋವಿನಿಂದ ಪರಿಹಾರ ಪಡೆಯಲು ಮನೆಮದ್ದುಗಳನ್ನು ಅಳವಡಿಸಿಕೊಳ್ಳಬಹುದು. 1 ಚಮಚ ಜೇನುತುಪ್ಪ ಮತ್ತು 1 ಚಮಚ ಶುಂಠಿ ರಸವನ್ನು ತೆಗೆದುಕೊಳ್ಳಿ. ಚೆನ್ನಾಗಿ ಮಿಶ್ರಣ ಮಾಡಿ ನಂತರ ಸೇವಿಸಿ. ಇದು ಕೆಲವೇ ನಿಮಿಷಗಳಲ್ಲಿ ನೋವನ್ನು ಕಡಿಮೆ ಮಾಡುತ್ತದೆ. ಪಿರಿಯಡ್ಸ್ ಸಮಯದಲ್ಲಿ ನೀವು ದಿನಕ್ಕೆ ಎರಡು ಬಾರಿ ಈ ಮನೆಮದ್ದನ್ನು ತೆಗೆದುಕೊಂಡರೆ ಉತ್ತಮ.
ಇನ್ನು ಕೆಲವು ಯೋಗ ಮತ್ತು ವ್ಯಾಯಾಮಗಳನ್ನು ಮಾಡುವ ಮೂಲಕ ನೀವು ಮುಟ್ಟಿನ ನೋವಿನಿಂದ ಶಾಶ್ವತ ಪರಿಹಾರವನ್ನು ಪಡೆಯಬಹುದು. ಆದರೆ ನೋವು ತೀವ್ರವಾಗಿದ್ದರೆ, ನೀವು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ, ಇದು ಗುಪ್ತ ಆರೋಗ್ಯ ಸಮಸ್ಯೆಯೂ ಆಗಿರಬಹುದು.