ಬೇವು ತಿನ್ನುವುದರಿಂದ ಆರೋಗ್ಯಕ್ಕಿದೆ ಹಲವು ಲಾಭ
ಔಷಧೀಯ ಗುಣಗಳನ್ನು ಹೊಂದಿರುವ ಮರಗಳಲ್ಲಿ ಬೇವು ಒಂದು.
ಪ್ರಾಚೀನ ಕಾಲದಲ್ಲಿ ಇದನ್ನು ಆಯುರ್ವೇದದಲ್ಲಿಯೂ ಬಳಸಲಾಗುತ್ತಿತ್ತು.
ಪ್ರತಿನಿತ್ಯ ಬೇವಿನ ಸೊಪ್ಪನ್ನು ತಿನ್ನುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳು ಸಿಗುತ್ತವೆ.
ಬೇವಿನ ರಸವನ್ನು ಕುಡಿಯುವುದರಿಂದ ನಿಮ್ಮ ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ.
ಬೇವಿನ ಎಲೆಗಳು ಶಿಲೀಂಧ್ರನಾಶಕ ಗುಣಗಳನ್ನು ಹೊಂದಿವೆ. ಬೇವಿನ ಎಲೆಗಳು ಶಿಲೀಂಧ್ರಗಳ ಸೋಂಕನ್ನು ದೂರವಿಡುತ್ತವೆ.
ಶಿಲೀಂಧ್ರಗಳಿಂದ ಉಂಟಾಗುವ ಸೋಂಕನ್ನು ತಡೆಗಟ್ಟಲು ಬೇವಿನ ಸಾರಗಳನ್ನು ಬಳಸಲಾಗುತ್ತದೆ.
ಬೆಳಿಗ್ಗೆ ಎದ್ದ ನಂತರ ಬೇವಿನ ಸೊಪ್ಪನ್ನು ತಿನ್ನುವುದರಿಂದ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ದೇಹಕ್ಕೆ ರೋಗನಿರೋಧಕ ಶಕ್ತಿಯನ್ನು ನೀಡುತ್ತದೆ.
ಬೇವು ಸೇವಿಸುವುದರಿಂದ ನಮ್ಮ ರಕ್ತ ಶುದ್ಧವಾಗುತ್ತದೆ. ಬೇವು ಕೆಲವು ರೀತಿಯ ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.
ಬೇವಿನ ಎಲೆಗಳು ಚರ್ಮವನ್ನು ಹಾನಿಕಾರಕ ಸೂಕ್ಷ್ಮಾಣುಗಳಿಂದ ರಕ್ಷಿಸುತ್ತದೆ ಮತ್ತು ಚರ್ಮಕ್ಕೆ ಹೊಸ ಹೊಳಪನ್ನು ನೀಡುತ್ತದೆ.