ಸೊಳ್ಳೆ ಮಕ್ಕಳಿಗೆ ಮಾತ್ರವಲ್ಲ ಹಿರಿಯ ಜೀವಗಳಿಗೂ ಭಾರೀ ತೊಂದರೆ ಉಂಟು ಮಾಡುತ್ತದೆ.
ಸೊಳ್ಳೆ ಕಡಿತದಿಂದ ಮಲೇರಿಯಾ, ಡೆಂಗ್ಯೂ ಮಾತ್ರವಲ್ಲ ಅನೇಕ ರೋಗಗಳು ಬರುತ್ತವೆ.
ಕೆಲವು ವಿಧಾನಗಳನ್ನು ಅನುಸರಿಸಿದರೆ ಸೊಳ್ಳೆಗಳು ಮನೆಯ ಒಳಗೆ ಬಾರದಂತೆ ತಡೆಯಬಹುದು.
ಕಹಿ ಬೇವು ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆ ತಡೆಯಲು ಬೆಸ್ಟ್ ಮನೆ ಮದ್ದು.
ಕಹಿ ಬೇವಿನ ಎಣ್ಣೆಯನ್ನು ಬಳಸುವುದರಿಂದ ಸೊಳ್ಳೆಗಳು ಮನೆಯೊಳಗೆ ಬರುವುದಿಲ್ಲ.
ಒಂದು ದೀಪಕ್ಕೆ ಬೇವಿನ ಎಣ್ಣೆ ಹಾಕಿ ಆ ದೀಪವನ್ನು ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಉರಿಸಿದರೆ ಸಾಕು ಸೊಳ್ಳೆ ಮಾಯವಾಗಿ ಬಿಡುತ್ತದೆ.
ಬೇವಿನ ಎಣ್ಣೆಯನ್ನು ಅಲ್ಲಲ್ಲಿ ಸಿಂಪಡಿಸಿದರೂ ಸಾಕು ಸೊಳ್ಳೆಗಳು ಅದರ ಹತ್ತಿರವೂ ಸುಳಿಯುವುದಿಲ್ಲ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದು ಆಧರಿಸಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.