ದಪ್ಪನೆಯ ಮತ್ತು ಕಪ್ಪಾಗಿರುವ ಉದ್ದನೆಯ ಕೂದಲು ಹೊಂದಬೇಕು ಎಂಬುದು ಪ್ರತಿಯೊಬ್ಬರ ಆಸೆ. ಇದಕ್ಕಾಗಿ ಅನೇಕ ಎಣ್ಣೆಗಳನ್ನು ತಲೆಗೆ ಹಚ್ಚುತ್ತೇವೆ.
ಆದರೆ ಕೆಲವೊಂದು ಎಣ್ಣೆಯನ್ನು ತಲೆಗೆ ಹಚ್ಚಲೇಬಾರದು. ಇದು ಕೂದಲಿಗೆ ಭಾರೀ ಪ್ರಮಾಣದಲ್ಲಿ ಹಾನಿಯುಂಟು ಮಾಡುತ್ತದೆ.
ಅನೇಕ ಜನರು ಕೂದಲಿಗೆ ನಿಂಬೆ ಎಣ್ಣೆಯನ್ನು ಬಳಸುತ್ತಾರೆ. ಆದರೆ ಇದು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಏಕೆಂದರೆ ನಿಂಬೆ ಎಣ್ಣೆಯಲ್ಲಿ ಆಸಿಡ್ ಮಟ್ಟವು ತುಂಬಾ ಹೆಚ್ಚಾಗಿರುತ್ತದೆ.
ಕರ್ಪೂರ ಎಣ್ಣೆಯು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅನೇಕ ಜನರು ಹೇಳುತ್ತಾರೆ. ಆದರೆ ಚರ್ಮದ ಮೇಲೆ ತುರಿಕೆ, ದದ್ದು ಇತ್ಯಾದಿಗಳು ಕಾಣಿಸಿಕೊಳ್ಳಬಹುದು.
ಕೂದಲಿಗೆ ಆಲಿವ್ ಎಣ್ಣೆಯನ್ನು ಬಳಸುವುದರಿಂದ ಕೂದಲು ಉತ್ತಮ ಸ್ಥಿತಿಗೆ ಬರುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಆಲಿವ್ ಎಣ್ಣೆಯು ತುಂಬಾ ಜಿಡ್ಡಿನಾಗಿದ್ದು ಕೂದಲಿನ ರಂಧ್ರಗಳನ್ನು ಸುಲಭವಾಗಿ ತಡೆಯುತ್ತದೆ
ಆಲಿವ್ ಎಣ್ಣೆ ಹಚ್ಚಿದರೆ ಕೂದಲನ್ನು ಶುಚಿಗೊಳಿಸುವುದು ಸುಲಭವಲ್ಲ. ಇದು ಕೂದಲನ್ನು ತೆಳ್ಳಗೆ ಮಾಡಲು ಕೆಲಸ ಮಾಡುತ್ತದೆ.