ಡಯಾಬಿಟಿಸ್ ಅಷ್ಟೇ ಅಲ್ಲ, ಈ ಕಾಯಿಲೆಗಳಿಗೂ ಅತ್ಯುತ್ತಮ ಔಷಧ "ಬೇ ಎಲೆಗಳು"

ಬೇ ಎಲೆಗಳು

ಸಾಮಾನ್ಯವಾಗಿ ಭಕ್ಷ್ಯಗಳ ಪರಿಮಳ ಹೆಚ್ಚಿಸಲು ಬಳಸಲ್ಪಡುವ ಬೇ ಎಲೆಗಳು ಆರೋಗ್ಯಕ್ಕೂ ಹಲವು ಪ್ರಯೋಜನಗಳನ್ನು ನೀಡುತ್ತದೆ.

ಡಯಾಬಿಟಿಸ್

ಬೇ ಎಲೆಗಳನ್ನು ಪುಡಿ ಮಾಡಿಟ್ಟು ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಚಿಟಿಕೆಯಷ್ಟು ಇದನ್ನು ಸೇವಿಸುವುದರಿಂದ ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚಾಗದಂತೆ ತಡೆಯುತ್ತದೆ.

ಕೊಲೆಸ್ಟ್ರಾಲ್

ಬೇ ಎಲೆಗಳ ಬಳಕೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣ ತುಂಬಾ ಸುಲಭ. ಇದಕ್ಕಾಗಿ, ಬೇ ಎಲೆಗಳ ಚಹಾ ಸೇವನೆ ಉಪಯುಕ್ತವಾಗಿದೆ.

ಜೀರ್ಣಕ್ರಿಯೆ

ಬಿಸಿ ನೀರಿನಲ್ಲಿ ಬೇ ಎಲೆಗಳನ್ನು ಹಾಕಿ ಚಹಾ ರೀತಿ ಸೇವಿಸುವುದರಿಂದ ಎದೆಯುರಿ ಸೇರಿದಂತೆ ಜೀರ್ಣಕಾರಿ ಸಂಬಂಧಿತ ಸಮಸ್ಯೆಗಳಿಂದ ತಕ್ಷಣವೇ ಪರಿಹಾರ ಪಡೆಯಬಹುದು.

ಹೃದಯದ ರಕ್ಷಣೆ

ರುಟಿನ್, ಸ್ಯಾಲಿಸಿಲೇಟ್‌ಗಳು, ಕೆಫೀಕ್ ಆಮ್ಲ ಮತ್ತು ಫೈಟೊನ್ಯೂಟ್ರಿಯೆಂಟ್‌ಗಳಂತಹ ಅತ್ಯುತ್ತಮ ಸಂಯುಕ್ತಗಳನ್ನು ಹೊಂದಿರುವ ಬೇ ಎಲೆಗಳು ಹೃದಯ ರಕ್ತನಾಳದ ಕಾಯಿಲೆಗಳ ವಿರುದ್ಧ ರಕ್ಷಣೆ ಪಡೆಯುವಲ್ಲಿ ಪರಿಣಾಮಕಾರಿ ಆಗಿದೆ.

ನೆಗಡಿ ಶೀತ

ಬೇ ಎಲೆಗಳು ಶುಂಠಿ ಮಿಶ್ರಿತ ಚಹಾ ತಯಾರಿಸಿ ಕುಡಿಯುವುದರಿಂದ ಶೀತ, ನೆಗಡಿಯಿಂದಲೂ ಪರಿಹಾರ ಪಡೆಯಬಹುದು.

ನೋವು ನಿವಾರಕ

ಬೇ ಎಲೆ ಎಣ್ಣೆಯನ್ನು ನೋವಿನ ಜಾಗಕ್ಕೆ ಲೇಪಿಸುವುದರಿಂದ ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಉಳುಕು, ಸಂಧಿವಾತ ಮತ್ತು ಸಾಮಾನ್ಯ ನೋವುಗಳಿಂದ ಪರಿಹಾರ ನೀಡುತ್ತದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story