ಮಧುಮೇಹಿಗಳು ತಮ್ಮ ಆಹಾರ-ಪಾನೀಯಗಳ ಬಗ್ಗೆ ಸೂಕ್ತ ನಿಗಾ ವಹಿಸುವುದರಿಂದ ದೇಹದಲ್ಲಿ ಬ್ಲಡ್ ಶುಗರ್ ಹೆಚ್ಚಾಗುವುದನ್ನು ತಡೆಯಬಹುದು.
ಆರೋಗ್ಯ ತಜ್ಞರ ಪ್ರಕಾರ, ಬೆಂಡೆಕಾಯಿಯು ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಇದು ಟೈಪ್-1, ಟೈಪ್-2, ಗರ್ಭಾವಸ್ಥೆಯಲ್ಲಿ ಉಂಟಾಗುವ ಮಧುಮೇಹ ನಿಯಂತ್ರಣಕ್ಕ್ ರಾಮಬಾಣ ಎನ್ನಲಾಗಿದೆ.
ಮಧುಮೇಹಿಗಳು ನಿತ್ಯ 3-4 ಬೆಂಡೆಕಾಯಿಯನ್ನು ಬಳಸಿದರೂ ಸಾಕು ರಕ್ತದಲ್ಲಿ ಗ್ಲೂಕೋಸ್ ಅನ್ನು ನಿಯಂತ್ರಣದಲ್ಲಿಡಬಹುದು. ಮಾತ್ರವಲ್ಲ, ನಿತ್ಯ ಬೆಂಡೆಕಾಯಿ ಬಳಸುವುದರಿಂದ ಶುಗರ್ ಎಂದಿಗೂ ಹೆಚ್ಚಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಮಧುಮೇಹಿಗಳು ನಿತ್ಯ ಒಂದು ಲೋಟ ಬೆಂಡೆಕಾಯಿ ನೆನೆಸಿಟ್ಟ ನೀರನ್ನು ಕುಡಿಯುವುದರಿಂದ ಬ್ಲಡ್ ಶುಗರ್ ನಿಯಂತ್ರಣದಲ್ಲಿರುತ್ತದೆ.
ನಿತ್ಯ ರಾತ್ರಿವೇಳೆ ಒಂದು ಲೋಟ ನೀರಿನಲ್ಲಿ ಮೂರ್ನಾಲ್ಕು ಬೆಂಡೆಕಾಯಿಯನ್ನು ಮಧ್ಯಕ್ಕೆ ಕತ್ತರಿಸಿ ಚೂರು ಚೂರು ಮಾಡಿ ನೆನೆಸಿಡಿ.
ಬೆಳಿಗ್ಗೆಯಷ್ಟರಲ್ಲಿ ನೀರಿನಲ್ಲಿ ಬೆಂಡೆಕಾಯಿ ಲೋಳೆ ಬಿಟ್ಟಿರುತ್ತದೆ. ಈ ನೀರನ್ನು ಶೋಧಿಸಿ ಕುಡಿದರೆ ಮಧುಮೇಹ ನಿಯಂತ್ರಣ ಮಾತ್ರವಲ್ಲ, ತೂಕವೂ ಇಳಿಕೆಯಾಗಿ, ಕಣ್ಣಿನ ಆರೋಗ್ಯವೂ ಸುಧಾರಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.