ಈರುಳ್ಳಿ ರಸಕ್ಕೆ ಈ ಪುಡಿ ಬೆರೆಸಿ ಕುಡಿದರೆ ಶುಗರ್ ಸಂಪೂರ್ಣ ಕಂಟ್ರೋಲ್‌ನಲ್ಲಿರುತ್ತೆ!
ಈರುಳ್ಳಿ ರಸ ಸೇವನೆ ಮಧುಮೇಹ ನಿಯಂತ್ರಣದಲ್ಲಿ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಮಧುಮೇಹ ಅಂಗ ವೈಫಲ್ಯ, ಬೊಜ್ಜು, ಮೂತ್ರಪಿಂಡ ಮತ್ತು ಕಣ್ಣಿನ ವೈಫಲ್ಯಕ್ಕೂ ಕಾರಣವಾಗುತ್ತದೆ.
ಈರುಳ್ಳಿ ಕಡಿಮೆ ಕ್ಯಾಲೋರಿ ಹೊಂದಿದೆ. ವಿಟಮಿನ್ ಸಿ, ಬಿ ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ.
ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಈರುಳ್ಳಿಯಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದು ದೇಹದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿ.
ಜೀರ್ಣಕ್ರಿಯೆಯನ್ನು ಸರಿಪಡಿಸುತ್ತದೆ. ಈರುಳ್ಳಿಯಲ್ಲಿರುವ ಫೈಬರ್ ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ.
2 ಕತ್ತರಿಸಿದ ಈರುಳ್ಳಿ, 1 ಕಪ್ ನೀರು, ಸ್ವಲ್ಪ ಜೀರಿಗೆ ಪುಡಿ ಸೇರಿಸಿ ಬ್ಲೆಂಡರ್‌ನಲ್ಲಿ ಚೆನ್ನಾಗಿ ರುಬ್ಬಿ. ನಂತರ ಅದಕ್ಕೆ ನಿಂಬೆ ರಸ ಮತ್ತು ಕಲ್ಲು ಉಪ್ಪನ್ನು ಸೇರಿಸಿ ಕುಡಿಯಿರಿ.
ಊಟಕ್ಕೂ ಮುನ್ನ ಕುಡಿದರೆ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ. ಮಧುಮೇಹ ರೋಗಿಗಳು ಈರುಳ್ಳಿಯನ್ನು ಸಲಾಡ್ ರೂಪದಲ್ಲಿ ಸಹ ಸೇವಿಸಬಹುದು.
ಊಟಕ್ಕೂ ಮೊದಲು ಒಂದು ಬಟ್ಟಲಿನಲ್ಲಿ ಈರುಳ್ಳಿ ಮತ್ತು ಸೌತೆಕಾಯಿಯನ್ನು ಕತ್ತರಿಸಿ, ಉಪ್ಪು, ಕರಿಮೆಣಸು ಮತ್ತು ನಿಂಬೆ ರಸವನ್ನು ಸೇರಿಸಿ ತಿನ್ನಿರಿ.
ಸೂಚನೆ: ಇದು ಮನೆಮದ್ದನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.