ಪಪ್ಪಾಯಿ ಹಣ್ಣು ಸೇವನೆಯಿಂದ ನೀವು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಪಪ್ಪಾಯಿ ಫೈಬರ್, ಪ್ರೊಟೀನ್, ವಿಟಮಿನ್ C & A, ಫೋಲೇಟ್ , ಪೊಟ್ಯಾಸಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಂನಿಂದ ಸಮೃದ್ಧವಾಗಿದೆ.
ಪಪ್ಪಾಯಿ ಹಣ್ಣು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಹೊಟ್ಟೆನೋವು ಇರುವವರಿಗೆ ಪಪ್ಪಾಯಿ ಹಣ್ಣು ಔಷಧಿ ಇದ್ದಂತೆ.
ಪಪ್ಪಾಯಿ ತಿನ್ನುವುದರಿಂದ 200% ವಿಟಮಿನ್ ʼಸಿʼ ದೊರೆಯುತ್ತದೆ.
ಪಪ್ಪಾಯಿ ಹಣ್ಣು ಮಧುಮೇಹವನ್ನು ನಿಯಂತ್ರಿಸಲು ಸಹಕಾರಿಯಾಗಿದೆ.
ಪಪ್ಪಾಯಿ ಹಣ್ಣು ಆಸ್ತಮಾ ಕಾಯಿಲೆಯನ್ನು ತಡೆಗಟ್ಟಲು ಸಹಕಾರಿ.
ಪಪ್ಪಾಯಿಯಲ್ಲಿರುವ ವಿಟಮಿನ್ ʼಕೆʼ ಮೂಳೆಯ ಆರೋಗ್ಯಕ್ಕೆ ಸಹಕಾರಿ.