Papaya seeds: ಪಪ್ಪಾಯಿ ಬೀಜಗಳಲ್ಲಿದೆ ಈ ಕಾಯಿಲೆ ಗುಣಪಡಿಸುವ ಶಕ್ತಿ
ಪಪ್ಪಾಯಿಯನ್ನು ತಿಂದ ನಂತರ ಬೀಜಗಳನ್ನು ಎಸೆಯಲಾಗುತ್ತದೆ. ಆದರೆ, ಪಪ್ಪಾಯಿ ಬೀಜಗಳಲ್ಲಿ ಹಲವು ಪೋಷಕಾಂಶಗಳಿವೆ. ಅವು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತವೆ.
ಪಪ್ಪಾಯಿ ಹಣ್ಣಿನಂತೆ ಅದರ ಬೀಜಗಳಲ್ಲಿನ ಜೀರ್ಣಕಾರಿ ಕಿಣ್ವಗಳು ಆಹಾರದ ಪ್ರೋಟೀನ್‌ಗಳನ್ನು ಒಡೆಯಲು ಸಹಾಯ ಮಾಡುತ್ತದೆ.
ಪಪ್ಪಾಯಿ ಬೀಜಗಳು ಹೊಟ್ಟೆಯ ಸಮಸ್ಯೆ ನಿವಾರಿಸಿ, ನೈಸರ್ಗಿಕವಾಗಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಪ್ರತಿದಿನ ಸೇವಿಸಿದರೆ ಹೊಟ್ಟೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಇದಲ್ಲದೆ, ಹೃದಯದ ತೊಂದರೆಗಳನ್ನು ಕೂಡ ದೂರ ಮಾಡುತ್ತವೆ.
ಪಪ್ಪಾಯಿ ಬೀಜಗಳಿಗೆ ಕ್ಯಾನ್ಸರ್ ಕೋಶಗಳನ್ನು ಗುಣಪಡಿಸುವ ಸಾಮರ್ಥ್ಯವೂ ಇದೆ.
ಪಪ್ಪಾಯಿ ಬೀಜಗಳನ್ನು ತಿನ್ನಲು ಜನರು ಹಲವಾರು ವಿಧಾನಗಳನ್ನು ಅನುಸರಿಸುತ್ತಾರೆ. ಕೆಲವರು ಇದನ್ನು ಸಲಾಡ್‌ನಲ್ಲಿ ಬೆರೆಸಿ ತಿನ್ನುತ್ತಾರೆ.
ಪಪ್ಪಾಯಿ ಬೀಜಗಳು ಹೊಟ್ಟೆಯ ಕೊಬ್ಬನ್ನು ಸಹ ತುಂಬಾ ಒಳ್ಳೆಯದು. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಮತ್ತು ಮಿನರಲ್ಸ್ ದೇಹಕ್ಕೆ ಶಕ್ತಿ ನೀಡುತ್ತದೆ.
ಯಕೃತ್ತಿನ ಆರೋಗ್ಯಕ್ಕಾಗಿ ಪಪ್ಪಾಯಿ ಬೀಜಗಳನ್ನು ತಿನ್ನುವುದು ಉತ್ತಮ. ಇದು ಯಕೃತ್ತಿನ ಸಿರೋಸಿಸ್ ವಿರುದ್ಧ ಹೋರಾಡುವ ಅಂಶಗಳನ್ನು ಒಳಗೊಂಡಿದೆ.
ಸೂಚನೆ: ಈ ಮಾಹಿತಿಯು ಮನೆಮದ್ದುಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. Zee ಮೀಡಿಯಾ ಖಚಿತಪಡಿಸುವುದಿಲ್ಲ.