ಪರಂಗಿ ಎಲೆಗಳ ಬಳಕೆಯಿಂದ ಆರೋಗ್ಯಕ್ಕಿದೆ ಇಷ್ಟೆಲ್ಲಾ ಅದ್ಭುತ ಪ್ರಯೋಜನ
ಪರಂಗಿ ಎಲೆ ರಸದಲ್ಲಿ ವಿಟಮಿನ್ ಎ, ಬಿ, ಸಿ, ಡಿ ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತದೆ.
ಪರಂಗಿ ಎಲೆಗಳನ್ನು ಚೆನ್ನಾಗಿ ತೊಳೆದು ಅದರ ರಸ ತಯಾರಿಸಿ ಕುಡಿಯುವುದರಿಂದ ಇದು ನಮ್ಮನ್ನು ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಂದ ದೂರ ಉಳಿಯುವಂತೆ ಮಾಡುತ್ತದೆ. ಅವುಗಳೆಂದರೆ...
ಪರಂಗಿ ಎಲೆ ರಸ ಸೇವನೆಯು ಪ್ಲೇಟ್‌ಲೆಟ್‌ಗಳನ್ನು ಹೆಚ್ಚಿಸಲು ತುಂಬಾ ಪ್ರಯೋಜನಕಾರಿ. ಇದು ಡೆಂಗ್ಯೂ ವಿರುದ್ಧ ಹೋರಾಡುವಲ್ಲಿ ಪರಿಣಾಮಕಾರಿ ಔಷಧಿಯಾಗಿದೆ.
ಪರಂಗಿ ಎಳೆಯ ಟೀ ತಯಾರಿಸಿ ಕುಡಿಯುವುದರಿಂದ ಹಸಿವು ಹೆಚ್ಚಾಗುತ್ತದೆ.
ಪರಂಗಿ ಎಲೆ ರಸ ಸೇವಿಸುವುದರಿಂದ ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪರಂಗಿ ಎಲೆಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಇದರ ಬಳಕೆಯಿಂದ ಯಕೃತ್ತಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ದೂರ ಉಳಿಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.