ಈ ಆರೋಗ್ಯ ಸಮಸ್ಯೆಗಳಿದ್ದರೆ ಅಪ್ಪಿತಪ್ಪಿಯೂ ಅಂಜೂರ ತಿನ್ನಲೇಬಾರದು!

Yashaswini V
Mar 13,2025

ಅಂಜೂರ

ಅಂಜೂರದಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಂ, ತಾಮ್ರ, ರಂಜಕ, ಮ್ಯಾಂಗನೀಸ್ ಸೇರಿದಂತೆ ಹಲವು ಪೋಷಕಾಂಶಗಳಿದ್ದು ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭದಾಯಕವಾಗಿದೆ

ಅಂಜೂರದ ಸೈಡ್ ಎಫೆಕ್ಟ್

ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿರುವ ಅಂಜೂರವು ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಪ್ರತಿಕೂಲ ಪರಿಣಾಮವನ್ನು ಉಂಟು ಮಾಡಬಹುದು. ಹಾಗಾಗಿ, ಅಂತಹವರು ಅಂಜೂರ ಸೇವನೆ ತಪ್ಪಿಸಬೇಕು.

ಅಲರ್ಜಿ

ಅಲರ್ಜಿ ಸಮಸ್ಯೆ ಇರುವವರಿಗೆ ಅಂಜೂರ ಸೇವನೆ ಹಾನಿಕಾರಕವಾಗಿದೆ. ಅಲರ್ಜಿ ಇರುವವರು ಅಂಜೂರವನ್ನು ತಿನ್ನುವುದರಿಂದ ತುರಿಕೆ, ದದ್ದುಗಳು ಹೆಚ್ಚಾಗಬಹುದು.

ಮಧುಮೇಹ

ಅಂಜೂರದಲ್ಲಿ ನೈಸರ್ಗಿಕ ಸಕ್ಕರೆ ಅಂಶಗಳಿದ್ದು ಇದನ್ನು ತಿನ್ನುವುದರಿಂದ ಶುಗರ್ ಲೆವೆಲ್ ಹೆಚ್ಚಾಗುವ ಸಂಭವವಿದೆ.

ಗ್ಯಾಸ್ಟ್ರಿಕ್

ಅಂಜೂರದಲ್ಲಿ ಫೈಬರ್ ಹೇರಳವಾಗಿರುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರಿಗೆ ಇದು ಹಾನಿಕಾರಕ ಎಂದು ಸಾಬೀತುಪಡಿಸಬಹುದು..

ಯಕೃತ್

ಯಕೃತ್ ಸಂಬಂಧಿತ ಯಾವುದೇ ಸಮಸ್ಯೆ ಇರುವವರು ಅಂಜೂರದ ಹಣ್ಣನ್ನು ಸೇವಿಸಬಾರದು. ಇಲ್ಲವೇ, ಇದು ಯಕೃತ್ತಿನ ಒತ್ತಡವನ್ನು ಹೆಚ್ಚಿಸಬಹುದು.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story