ಈ ಸಮಸ್ಯೆಗಳಿದ್ದವರು ಮರೆತು 'ಎಳನೀರು' ಕುಡಿದರೂ ಬಿಗಡಾಯಿಸುತ್ತೆ ಆರೋಗ್ಯ....

Yashaswini V
Jun 10,2025

ಎಳನೀರು

ವಿಟಮಿನ್ ಸಿ, ವಿಟಮಿನ್ ಇ, ಕ್ಯಾಲ್ಸಿಯಂ, ತಾಮ್ರ, ಕಬ್ಬಿಣ, ರಂಜಕ, ಪೊಟ್ಯಾಸಿಯಮ್ ಸೇರಿದಂತೆ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಹಲ್ವು ಪೋಷಕಾಂಶಗಳನ್ನು ಹೊಂದಿರುವ ಎಳನೀರು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.

ಎಳನೀರಿನ ಪ್ರಯೋಜನಗಳು

ನೈಸರ್ಗಿಕ ಎನರ್ಜಿ ಡ್ರಿಂಕ್ ಆಗಿರುವ ಎಳನೀರು ದೇಹಕ್ಕೆ ರೀತಿಯಲ್ಲಿ ಪ್ರಯೋಜನಕಾರಿ. ಸುಸ್ತು, ಆಯಾಸದ ಸಂದರ್ಭದಲ್ಲಿ ಇದನ್ನು ಕುಡಿದರೆ ಹೋದ ಜೀವವೇ ಮರಳಿ ಬಂದಂತಾಗುತ್ತದೆ. ದೇಹವನ್ನು ಹೈಡ್ರೀಕರಿಸಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಎಳನೀರು ವರದಾನವಿದ್ದಂತೆ.

ಎಳನೀರಿನ ಸೈಡ್ ಎಫೆಕ್ಟ್ಸ್

ಹಲವು ಆರೋಗ್ಯ ಪ್ರಯೋಜನಗಳಿದ್ದರೂ ಸಹ ಕೆಲವು ಆರೋಗ್ಯ ಸಮಸ್ಯೆಗಳಿದ್ದವರಿಗೆ ಎಳನೀರು ಗಂಭೀರ ಹಾನಿಯನ್ನುಂಟು ಮಾಡಬಹುದು.

ಎಳನೀರು ಯಾರಿಗೆ ಒಳ್ಳೆಯದಲ್ಲ

ಕೆಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರು ಅಪ್ಪಿತಪ್ಪಿ ಎಳನೀರನ್ನು ಸವಿದರೂ ಸಹ ಅವರ ಆರೋಗ್ಯ ಬಿಗಡಾಯಿಸುವ ಸಂಭವವಿರುತ್ತದೆ. ಹಾಗಿದ್ದರೆ, ಯಾರೆಲ್ಲಾ ಎಳನೀರು ಕುಡಿಯಬಾರದು ಎಂದು ತಿಳಿಯೋಣ...

ಡಯಾಬಿಟಿಸ್

ಡಯಾಬಿಟಿಸ್ ರೋಗಿಗಳಿಗೆ ಎಳನೀರು ಅಪಾಯಕಾರಿ ಪಾನೀಯ. ಎಳನೀರಿನಲ್ಲಿ ಗ್ಲೈಸೆಮಿಕ್ ಸೂಚ್ಯಂತ ಹೆಚ್ಚಾಗಿರುವುದರಿಂದ ಇದನ್ನು ಕುಡಿದ ಕೂಡಲೇ ಶುಗರ್ ಲೆವೆಲ್ ತ್ವರಿತವಾಗಿ ಏರಿಕೆಯಾಗುತ್ತದೆ.

ರಕ್ತದೊತ್ತಡ

ರಕ್ತದೊತ್ತಡ ಸಮಸ್ಯೆ ಇದ್ದು ಬಿಪಿ ಔಷಧಿಗಳನ್ನು ತೆಗೆಯುತ್ತಿರುವವರಿಗೆ ಎಳನೀರು ಸೂಕ್ತವಲ್ಲ. ಕಾರಣ ಎಳನೀರಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿದ್ದು ಇದು ಬಿಪಿ ಔಷಧಿಗಳೊಂದಿಗೆ ಪ್ರತಿಕ್ರಿಯಿಸಬಹುದು. ಹಾಗಾಗಿ, ವೈದ್ಯರನ್ನು ಸಂಪರ್ಕಿಸದೆ ಎಳನೀರು ಸೇವಿಸುವುದು ಸೂಕ್ತವಲ್ಲ.

ಕಿಡ್ನಿ ಸಮಸ್ಯೆ

ಮೊದಲೇ ತಿಳಿಸಿದಂತೆ ಎಳನೀರಿನಲ್ಲಿ ಪೊಟ್ಯಾಸಿಯಮ್ ಹೇರಳವಾಗಿರುವುದರಿಂದ ಕಿಡ್ನಿ ಸಮಸ್ಯೆ ಇದ್ದವರು ಇದನ್ನು ಕುಡಿದರೆ ಮೂತ್ರಪಿಂಡ ಕಾರ್ಯನಿರ್ವಹಣೆಗೆ ತೊಡಕುಂಟಾಗಬಹುದು.

ಉಸಿರಾಟದ ಸಮಸ್ಯೆ

ಉಸಿರಾಟದ ಸಮಸ್ಯೆ ಇದ್ದವರು, ಅದರಲ್ಲೂ ಆಸ್ತಮಾದಂತಹ ಸಮಸ್ಯೆ ಇದ್ದವರು ಎಳನೀರನ್ನು ಕುಡಿಯುವುದರಿಂದ ಸಮಸ್ಯೆ ಉಲ್ಬಣಿಸಬಹುದು.

ಗರ್ಭಿಣಿಯರು

ಗರ್ಭದಾರಣೆಯ ಮೊದಲ ಮೂರು ತಿಂಗಳು ಎಳನೀರನ್ನು ಕುಡಿಯುವುದು ಅಷ್ಟು ಸೂಕ್ತವಲ್ಲ. ಎಳನೀರಿನ ಸೇವನೆಯಿಂದ ಮಹಿಳೆಯರಲ್ಲಿ ಊತ, ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಬಹುದು ಎನ್ನಲಾಗುತ್ತದೆ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story