ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯವಾದ ತುಳಸಿ ಗಿಡವನ್ನು ತಾಯಿ ಲಕ್ಷ್ಮಿದೇವಿಯ ರೂಪವೆಂದು ಪರಿಗಣಿಸಲಾಗಿದೆ.
ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ನೆಡುವುದು ತುಂಬಾ ಶುಭಕರವೆಂದು ನಂಬಲಾಗಿದೆ.
ತುಳಸಿ ಗಿಡವನ್ನು ನೆಡುವುದರಿಂದ ಮನೆಯಲ್ಲಿ ಸುಖ-ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ಅದೇ ರೀತಿ ತುರಳಿ ಗಿಡವನ್ನ ತಪ್ಪು ದಿಕ್ಕಿನಲ್ಲಿ ನೆಡುವುದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ.
ತಪ್ಪು ದಿಕ್ಕಿನಲ್ಲಿ ತುಳಸಿ ಗಿಡ ನೆಟ್ಟರೆ ಅದು ಬೇಗನೆ ಒಣಗುತ್ತದೆ ಮತ್ತು ಮನೆಯಲ್ಲಿ ಬಡತನ ಹೆಚ್ಚಿಸುತ್ತದೆ.
ಹೀಗಾಗಿ ಮನೆಯ ಯಾವ ದಿಕ್ಕಿನಲ್ಲಿ ತುಳಸಿಗಿಡ ನೆಟ್ಟರೆ ಒಳಿತು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಸಂಪತ್ತಿನ ದೇವರು ಕುಬೇರನ ಸ್ಥಳವಾದ ಉತ್ತರ ದಿಕ್ಕಿನಲ್ಲಿ ತುಳಸಿ ನೆಡುವುದರಿಂದ ನಿಮ್ಮ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತದೆ.
ವಾಸ್ತು ನಿಯಮಗಳ ಪ್ರಕಾರ ಅಪ್ಪಿತಪ್ಪಿಯೂ ತುಳಸಿ ಗಿಡವನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು.