Poppy Seeds: ಗಸಗಸೆಯ ಆರೋಗ್ಯ ಪ್ರಯೋನಗಳೇನು ಗೊತ್ತಾ?
ಚಿಕ್ಕ ವಯಸ್ಸಿನಿಂದಲೇ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಗಸಗಸೆ ಒಂದೊಳ್ಳೆ ಮನೆಮದ್ದು.
ಗಸಗಸೆಯನ್ನು ಸರ್ವರೋಗ ನಿವಾರಕ ಎಂದು ಹೇಳಲಾಗುತ್ತದೆ.
ಗಸಗಸೆಯನ್ನು ನಿಯಮಿತವಾಗಿ ಸೇವಿಸುವುದರಿಂದ ಮೂಳೆಗಳನ್ನು ಬಲಪಡಿಸಬಹುದು.
ಗಸಗಸೆಯಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿದ್ದು, ಇದು ಮೂಳೆಗಳನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ ಮತ್ತು ಅನೇಕ ರೋಗಗಳಿಂದ ರಕ್ಷಿಸುತ್ತದೆ.
ಇದಲ್ಲದೇ ಗಸಗಸೆ ಆರೋಗ್ಯಕ್ಕೆ ಮಾತ್ರವಲ್ಲದೆ ಆರೋಗ್ಯಕರ ತ್ವಚೆಗೂ ವರದಾನವಾಗಿದೆ.
ಗಸಗಸೆಯನ್ನು ಸೇವಿಸುವುದರಿಂದ ತ್ವಚೆಯನ್ನು ಮೃದುವಾಗಿಸಿ ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಬಹುದು..
ಈ ಗಸಗಸೆಯನ್ನು ಹೋಳಿಗೆ, ಸಲಾಡ್, ಲಸ್ಸಿ, ರೋಟಿ ಹೀಗೆ ಹಲವಾರು ವಿವಿಧ ರೀತಿಯ ಆಹಾರದಲ್ಲಿ ಸೇರಿಸಿ ಸೇವಿಸಬಹುದು..