ಈ ಹತ್ತು ಆರೋಗ್ಯ ಸಮಸ್ಯೆಗಳಿಗೆ ದಿವ್ಯೌಷಧ ಮೂಲಂಗಿ
ಪ್ರತಿದಿನ ಸಲಾಡ್ ರೂಪದಲ್ಲಿ ಮೂಲಂಗಿಯನ್ನು ತಿನ್ನುವವರ ದೇಹದಲ್ಲಿ ಫೈಬರ್ ಕೊರತೆ ಇರುವುದಿಲ್ಲ. ಇದರಿಂದಾಗಿ ಜೀರ್ಣಾಂಗ ವ್ಯವಸ್ಥೆ ಸರಿಯಾಗಿರುತ್ತದೆ.
ಮೂಲಂಗಿ ರಸವನ್ನು ನಿಂಬೆ ಮತ್ತು ಕಲ್ಲು ಉಪ್ಪಿನೊಂದಿಗೆ ಬೆರೆಸಿ ಕುಡಿಯುವುದರಿಂದ ಬೊಜ್ಜು ಕರಗುತ್ತದೆ. ಇದರಿಂದ ಸ್ಥೂಲಕಾಯತೆಯಿಂದ ಪರಿಹಾರ ಪಡೆಯಬಹುದು.
ಮೂಲಂಗಿ ರಸ ಸೇವನೆಯಿಂದ ಕಿಡ್ನಿ ಸಂಬಂಧಿತ ಹಲವು ಆರೋಗ್ಯ ಸಮಸ್ಯೆಗಳಿಂದ ಸುಲಭ ಪರಿಹಾರ ಪಡೆಯಬಹುದು.
ಮೂಲಂಗಿಯಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡುಬರುತ್ತದೆ. ಹಾಗಾಗಿ, ಮೂಲಂಗಿ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ.
ಮೂಲಂಗಿಯ ಸಣ್ಣ ತುಂಡುಗಳಿಗೆ ನಿಂಬೆ ರಸವನ್ನು ಸೇರಿಸಿ ಮತ್ತು ಹಲ್ಲಿನ ಮೇಲೆ ಉಜ್ಜಿಕೊಳ್ಳುವುದರಿಂದ ಹಲ್ಲುಗಳ ಹಳದಿ ಬಣ್ಣವು ಕಡಿಮೆಯಾಗುತ್ತದೆ.
ಮೂಲಂಗಿ ಎಲೆಗಳ ರಸವನ್ನು ಚರ್ಮಕ್ಕೆ ಅನ್ವಯಿಸುವುದರಿಂದ ಕೋಮಲವಾದ, ಕಲೆ ರಹಿತ ತ್ವಚೆಯನ್ನು ನಿಮ್ಮದಾಗಿಸಬಹುದು.
ಮೂಲಂಗಿಯಲ್ಲಿ ಕ್ಯಾಲ್ಸಿಯಂ ಹೇರಳವಾಗಿ ಕಂಡು ಬರುತ್ತದೆ. ಇದು ಮೂಳೆಗಳನ್ನು ಬಳಪಡಿಸಲು ಸಹಕಾರಿ ಆಗಿದೆ.
ಮೂಲಂಗಿ ದೇಹಕ್ಕೆ ಪೊಟ್ಯಾಸಿಯಮ್ ಅನ್ನು ಪೂರೈಸುತ್ತದೆ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಮೂಲಂಗಿಯಲ್ಲಿ ಉತ್ತಮ ಪ್ರಮಾಣದ ಕಾಲಜನ್ ಕಂಡುಬರುತ್ತದೆ, ಇದು ನಮ್ಮ ರಕ್ತನಾಳಗಳನ್ನು ಬಲಪಡಿಸುತ್ತದೆ.
ಮೂಲಂಗಿಯನ್ನು ಸೇವಿಸುವುದರಿಂದ ಇದು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುವುದು ಮಾತ್ರವಲ್ಲದೆ ನಿಮ್ಮನ್ನು ನಿದ್ದೆ ಮಾಡಲು ಪ್ರೇರೇಪಿಸುತ್ತದೆ.
ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.