ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿರುವ ಒಣದ್ರಾಕ್ಷಿ ಸೇವನೆಯು ಆರೋಗ್ಯಕ್ಕೆ ಹತ್ತು ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಹಲವು ರೋಗಗಳಿಗೆ ಒಣದ್ರಾಕ್ಷಿ ದಿವ್ಯೌಷಧವಾಗಿದೆ.
ರಾತ್ರಿ ವೇಳೆ ಒಂದು ಲೋಟ ನೀರಿನಲ್ಲಿ ಒಂದು ಸ್ಪೂನ್ ಒಣದ್ರಾಕ್ಷಿಯನ್ನು ನೆನೆಸಿಟ್ಟು ಕುಡಿಯುವುದರಿಂದ ರಕ್ತ ಶುದ್ಧೀಕರಣವಾಗುತ್ತದೆ.
ಒಣದ್ರಾಕ್ಷಿ ಹಾಗೂ ಬೆಳ್ಳುಳ್ಳಿಯನ್ನು ಹುರಿದು ತಿನ್ನುವುದರಿಂದ ಇದು ಗ್ಯಾಸ್ಟ್ರಿಕ್, ಎದೆಯುರಿಯಂತಹ ಸಮಸ್ಯೆಯಿಂದ ಕೂಡಲೇ ಪರಿಹಾರ ನೀಡುತ್ತದೆ.
ಒಂದೆರಡು ಒಣದ್ರಾಕ್ಷಿಯನ್ನು ಹಾಗೆ ಬಾಯಲ್ಲಿ ಇಟ್ಟುಕೊಂಡರೆ ಸಾಕು ದೇಹದ ದೌರ್ಬಲ್ಯ ಕೂಡಲೇ ನಿವಾರಣೆಯಾಗುತ್ತದೆ.
ಒಣದ್ರಾಕ್ಷಿ ಕಬ್ಬಿಣಾಂಶದ ಉತ್ತಮ ಮೂಲವಾಗಿರುವುದರಿಂದ ಇದರ ಸೇವನೆಯಿಂದ ರಕ್ತಹೀನತೆ ಸಮಸ್ಯೆಯಿಂದ ಪರಿಹಾರ ದೊರೆಯುತ್ತದೆ.
ನಾಲ್ಕೈದು ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆಸಿಟ್ಟು ತಿಂದರೆ ತಲೆಸುತ್ತಿನ ಸಮಸ್ಯೆ ನಿವಾರಣೆಯಾಗುತ್ತದೆ.
ಮೂಗಿನಲ್ಲಿ ರಕ್ತಸ್ರಾವದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟ ಒಣದ್ರಾಕ್ಷಿಯನ್ನು ತಿನ್ನುವುದರಿಂದ ಪರಿಹಾರ ದೊರೆಯುತ್ತದೆ.
ಒಣದ್ರಾಕ್ಷಿಯನ್ನು ಸ್ವಲ್ಪ ಹುರಿದು ಕರಿಮೆಣಸಿನ ಪುಡಿ ಬೆರೆಸಿ ತಿನ್ನುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.