ಭಾರತೀಯ ಖಾದ್ಯಗಳಲ್ಲಿ ಪ್ರಮುಖವಾಗಿ ಬಳಸ್ಪಡುವ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ವರದಾನವಾಗಿದೆ.
ಈರುಳ್ಳಿಯಲ್ಲಿ ವಿಟಮಿನ್ ಸಿ, ಬಿ-6, ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಪೋಲೆಟ್, ಮೆಗ್ನೀಸಿಯಂ, ರಂಜಕ, ಪೊಟ್ಯಾಸಿಯಮ್, ಉತ್ಕರ್ಷಣ ನಿರೋಧಕಗಳಿಂದ ಕೂಡಿರುತ್ತದೆ.
ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇವುಗಳಲ್ಲಿ ಡಯಾಬಿಟಿಸ್ ನಿಯಂತ್ರಣ, ಕೊಲೆಸ್ಟ್ರಾಲ್ ಕಡಿಮೆ ಮಾಡುವುದು, ಜೀರ್ಣಕ್ರಿಯೆ ಸುಧಾರಿಸುವುದು ಹೀಗೆ ಹಲವು ಪ್ರಯೋಜನಗಳಿವೆ.
ಹಸಿ ಈರುಳ್ಳಿಯಲ್ಲಿ ಕರಗುವ ನಾರು ಅಧಿಕವಾಗಿದ್ದು ಇದು ಪ್ರಬಲ ಪ್ರಿಬಯಾಟಿಕ್ ಆಹಾರವಾಗಿದೆ.
ಈರುಳ್ಳಿಯಲ್ಲಿರುವ ಅಂಶಗಳು ಚಯಾಪಚಯವನ್ನು ಹೆಚ್ಚಿಸಿ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪರಿಣಾಮಕಾರಿ ಆಗಿದೆ.
ತೂಕ ಇಳಿಕೆ, ಹೊಟ್ಟೆಯ ಬೊಜ್ಜು ಕರಗಿಸಲು ಕೂಡ ಈರುಳ್ಳಿ ವರದಾನವಿದ್ದಂತೆ. ಹಸಿ ಈರುಳ್ಳಿ ತಿನ್ನುವುದರಿಂದ ಹೊಟ್ಟೆಯ ಬೊಜ್ಜು ಸುಲಭವಾಗಿ ಕರಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.