ಸರಿಯಾದ ರೀತಿಯಲ್ಲಿ ಚಿಕಿತ್ಸೆ ಮಾಡದಿದ್ದರೆ ಚಿಕ್ಕ ಗಾಯ ದೊಡ್ಡ ಗಾಯವಾಗುತ್ತದೆ.
ಸುಟ್ಟುಕೊಂಡ ತಕ್ಷಣ ನಲ್ಲಿಯಲ್ಲಿ ನೀರನ್ನು ಹರೆಯ ಬಿಟ್ಟು ಅದರಲ್ಲಿ ಸುಟ್ಟುಕೊಂಡ ಭಾಗವನ್ನು ಹಿಡಿಯಬೇಕು.
ತಣ್ಣೀರಿನಲ್ಲಿ ಗಾಯವನ್ನು ಹಿಡಿದ ನಂತರ ಆ ಭಾಗಕ್ಕೆ ಸ್ವಲ್ಪ ಜೇನು ಹಾಕಿ. ಜೇನು ಹಾಕಿದರೆ ಒಳ್ಳೆಯದು ಎಂದು ವೈದ್ಯಕೀಯದವರು ಕೂಡ ಹೇಳುತ್ತಾರೆ.
ಟೊಮೆಟೊ, ಚೆರ್ರಿ, ದ್ರಾಕ್ಷಿ ಹೀಗೆ antioxidants ಜಾಸ್ತಿ ಇರುವ ಹಣ್ಣುಗಳನ್ನು ಸೇವಿಸಿದರೆ ಗಾಯ ಬೇಗನೆ ಗುಣಮುಖವಾಗುವುದು.
ರಾತ್ರಿ ಮಲಗುವಾಗ ಹಾಲನ್ನು ಬಿಸಿ ಮಾಡಿ ಅದರಲ್ಲಿ ಅರಿಶಿಣವನ್ನು ಕರಗಿಸಿ ಅದನ್ನು ಹಚ್ಚಿದರೆ ಗಾಯ ಗುಣವಾಗುತ್ತೆ.
ಲೋಳೆಸರ ಅತ್ಯುತ್ತಮ ಉರಿಯೂತ ನಿವಾರಕವಾಗಿದ್ದು ಈ ಗುಣ ಉರಿಯುತ್ತಿರುವ ಗಾಯವನ್ನು ತಣಿಸಿ ಉರಿಯನ್ನು ಇಲ್ಲವಾಗಿಸುತ್ತದೆ. ಅಲ್ಲದೇ ರಕ್ತಪರಿಚಲನೆಯನ್ನು ಉತ್ತಮಗೊಳಿಸುತ್ತದೆ.
ಟೀ ಗಿಡದಿಂದ ದೊರೆಯುವ ಎಣ್ಣೆಯನ್ನು ಸುಟ್ಟ ಗಾಯದ ಮೇಲೆ ಹಚ್ಚುವುದರಿಂದ ಗಾಯ ಗುಣಮುಖವಾಗುವುದು.
ಸುಟ್ಟ ಗಾಯ ಒಣಗಿದ ಮೇಲೆ ಕಲೆಗಳು ಹೋಗಲು ಲ್ಯಾವೆಂಡರ್ ಎಣ್ಣೆಯನ್ನು ಹಚ್ಚಿ.