Roasted Chana Benefits: ಪ್ರತಿದಿನ ಹುರಿಗಡಲೆ ಸೇವಿಸುವುದರ ಆರೋಗ್ಯ ಲಾಭಗಳಿವು
ಹುರಿಗಡಲೆಯನ್ನು ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.
ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ಲಭ್ಯವಿರುವುದರಿಂದ ಇದನ್ನು ಪ್ರತಿದಿನ ಸೇವಿಸುವುದು ಉತ್ತಮ.
ಹುರಿಗಡಲೆಯಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಆದ್ದರಿಂದ ಪ್ರತಿದಿನ ಹುರಿಗಡಲೆ ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆಗಳು ಹಾಗೂ ದೇಹದ ತೂಕವನ್ನು ನಿಯಂತ್ರಿಸುತ್ತದೆ.
ಹುರಿಗಡಲೆ ಸೇವನೆಯಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವು ಸುಲಭವಾಗಿ ಕಡಿಮೆಯಾಗುತ್ತದೆ.
ಹೃದಯಕ್ಕೆ ಉತ್ತಮವಾದ ಹಲವಾರು ಔಷಧೀಯ ಗುಣಗಳನ್ನು ಹುರಿಗಡಲೆ ಹೊಂದಿದೆ. ಹಾಗಾಗಿ ಪ್ರತಿ ದಿನ ಸಂಜೆ ತಿನ್ನುವುದರಿಂದ ಸಾಕಷ್ಟು ಲಾಭವಾಗುತ್ತದೆ.
ಇದರಲ್ಲಿರುವ ಫೈಬರ್ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹುರಿಗಡಲೆ ಪ್ರತಿದಿನ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ಹುರಿಗಡಲೆಯಲ್ಲಿ ಲಭ್ಯವಿರುವ ಫೈಬರ್ ಪ್ರಮಾಣವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.
ಹುರಿಗಡಲೆ ಮಲಬದ್ಧತೆ, ಹೊಟ್ಟೆ ನೋವನ್ನು ಸುಲಭವಾಗಿ ನಿವಾರಿಸುತ್ತದೆ.