ಬದಲಾಗುತ್ತಿರುವ ಜೀವನಶೈಲಿಯಲ್ಲಿ ಜನರು ಮಸಾಲೆಯುಕ್ತ, ಎಣ್ಣೆಯುಕ್ತ ಆಹಾರ, ಜಂಕ್ ಫುಡ್‌ಗಳತ್ತ ವಾಲುತ್ತಿದ್ದಾರೆ. ಇಂಥಹ ಆಹಾರವು ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆಗಳು, ಮಲಬದ್ಧತೆ, ಗ್ಯಾಸ್, ಅಸಿಡಿಟಿ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ.
ಇಂಥಹ ಸ್ಥಿತಿಯಲ್ಲಿ ಹುರಿದ ಆಹಾರಗಳತ್ತ ಗಮನ ಹರಿಸಬಹುದು. ಹುರಿದ ಆಹಾರಗಳು ಆರೋಗ್ಯಕ್ಕೆ ಉತ್ತಮವಾಗಿರುತ್ತವೆ.
ಯಾವುದೇ ತರಕಾರಿಯನ್ನು ಹುರಿದಾಗ ಅದರಲ್ಲಿರುವ ಪೋಷಕಾಂಶಗಳು, ವಿಟಮಿನ್ ಗಳು, ಖನಿಜಗಳು ನಷ್ಟವಾಗುವುದಿಲ್ಲ.
ಹುರಿದ ಆಹಾರಗಳಲ್ಲಿ ಎಣ್ಣೆಯ ಬಳಕೆ ಕಡಿಮೆಯಾಗಿರುತ್ತದೆ. ಇದರಿಂದ ತೂಕ ಹೆಚ್ಚಳ, ಕೊಲೆಸ್ಟ್ರಾಲ್ ಮುಂತಾದ ಸಮಸ್ಯೆಗಳ ಅಪಾಯ ಕಡಿಮೆಯಾಗುತ್ತದೆ.
ಹುರಿದ ಆಲೂಗಡ್ಡೆ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಇದು ಜೀರ್ಣಕಾರಿ ಕಿಣ್ವಗಳನ್ನು ಹೆಚ್ಚಿಸುತ್ತದೆ.
ಹುರಿದ ಆಲೂಗಡ್ಡೆ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಹುರಿದ ಆಲೂಗಡ್ಡೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.
ಪೇರಳೆಯನ್ನು ಕೂಡಾ ಬೆಂಕಿಯಲ್ಲಿ ಹುರಿದು ತಿನ್ನಬಹುದು. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ ಸೋಂಕು ಮುಂತಾದ ಸಮಸ್ಯೆಗಳಿಂದ ಪರಿಹಾರ ನೀಡುತ್ತದೆ.
ಕೆಲವರು ಈ ತರಕಾರಿಗಳನ್ನು ಹುರಿಯುವ ಮೊದಲು ಅದರ ಮೇಲೆ ಸಾಕಷ್ಟು ಎಣ್ಣೆ, ಮಸಾಲೆಗಳನ್ನು ಹಾಕುತ್ತಾರೆ. ಹೀಗೆ ತಿನ್ನುವುದು ಎಂದಿಗೂ ಆರೋಗ್ಯಕರವಲ್ಲ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.