ಐಸ್ ಕ್ರೀಂ ತಿಂದ ನಂತರ ಈ ವಸ್ತುಗಳನ್ನು ತಿನ್ನಲೇ ಬಾರದು !

Ranjitha R K
Apr 22,2024

ಐಸ್ ಕ್ರೀಂ ಜೊತೆ ಸೇವಿಸಬಾರದು

ಐಸ್ ಕ್ರೀಂ ತಿಂದ ಬಳಿಕ ಕೆಲವರಿಗೆ ನೀರು ಕುಡಿಯುವ ಅಭ್ಯಾಸವಿರುತ್ತದೆ. ಆದ್ರೆ ಹೀಗೆ ಮಾಡಿದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಬಾಯಾರಿಕೆ

ಐಸ್ ಕ್ರೀಂ ಸೇವಿಸಿದ ನಂತರ ಸಾಮಾನ್ಯವಾಗಿ ಬಾಯಾರಿಕೆಯಾಗುತ್ತದೆ. ಯಾಕೆಂದರೆ ಐಸ್ ಕ್ರೀಂ ನಲ್ಲಿ ಸಕ್ಕರೆ ಮತ್ತು ಸೋಡಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ.

ನೀರು

ಐಸ್ ಕ್ರೀಂ ತೊಂಡ ಬಳಿಕ ಯಾವುದೇ ಕಾರಣಕ್ಕೂ ನೀರು ಸೇವಿಸಬಾರದು. ಇದರಿಂದ ಶೀತ ಜ್ವರ ಕಾಣಿಸಿಕೊಳ್ಳುವ ಅಪಾಯ ಇರುತ್ತದೆ.

ಬಿಸಿ ಪದಾರ್ಥ

ಐಸ್ ಕ್ರೀಂ ತ್ರಿಂದ ತಕ್ಷಣ ಬಿಸಿ ಪದಾರ್ಥಗಳ ಸೇವನೆ ಕೂಡಾ ಮಾಡಬಾರದು.

ಹುಳಿ ಹಣ್ಣು

ಐಸ್ ಕ್ರೀಂ ತಿಂದ ನಂತರ ಹುಳಿ ಹಣ್ಣುಗಳಾದ ಕಿತ್ತಳೆ, ನಿಂಬೆ, ದ್ರಾಕ್ಷಿ ಮುಂತಾದವುಗಳನ್ನು ಸೇವಿಸಬಾರದು.

ಮೊಸರು

ಮೊಸರನ್ನು ಕೂಡಾ ಐಸ್ ಕ್ರೀಂ ಸೇವಿಸಿದ ನಂತರ ತಿನ್ನಬಾರದು.

ಚಹಾ

ಐಸ್ ಕ್ರೀಂ ತಿಂದ ಬಳಿಕ ಚಹಾ ಕುಡಿಯಬಾರದು. ಇದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.

ಬಿಸಿ ಸೂಪ್

ಬಿಸಿ ಬಿಸಿ ಸೂಪ್ ಅನ್ನು ಕೂಡಾ ಐಸ್ ಕ್ರೀಂ ಸೇವಿಸಿದ ಬಳಿಕ ಕುಡಿಯಬಾರದು.


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story