ಹಾಲಿನೊಂದಿಗೆ ಈ ಆಹಾರಗಳನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ

Bhavishya Shetty
Dec 01,2023

ಶಕ್ತಿ ಮತ್ತು ಪೋಷಕಾಂಶ

ಹಾಲು ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ಮತ್ತು ಪೋಷಕಾಂಶಗಳು ಸಿಗುತ್ತವೆ. ಏಕೆಂದರೆ ಹಾಲಿನಲ್ಲಿ ಕ್ಯಾಲ್ಸಿಯಂ, ಜೀವಸತ್ವಗಳು ಮತ್ತು ಪ್ರೋಟೀನ್’ಗಳಿವೆ.

ಹೆಲ್ತ್ ಟಿಪ್ಸ್

ಆದರೆ ಕೆಲವು ಆಹಾರ ಪದಾರ್ಥಗಳೊಂದಿಗೆ ಹಾಲನ್ನು ಕುಡಿಯಬಾರದು ಎಂದು ನಿಮಗೆ ತಿಳಿದಿದೆಯೇ? ಹಾಲನ್ನು ಅನೇಕ ಪದಾರ್ಥಗಳೊಂದಿಗೆ ಬೆರೆಸುವುದರಿಂದ ಪ್ರಯೋಜನಕ್ಕೆ ಬದಲಾಗಿ ಹಾನಿಯಾಗುತ್ತದೆ.

ಆಹಾರ ಪದಾರ್ಥ

ಯಾವ ಆಹಾರ ಪದಾರ್ಥಗಳೊಂದಿಗೆ ಹಾಲು ಸೇವಿಸಬಾರದು ಎಂಬುದನ್ನ ನಾವಿಂದು ನಿಮಗೆ ತಿಳಿಸಿಕೊಡಲಿದ್ದೇವೆ.

ಹುಳಿ ಪದಾರ್ಥ

ಹಾಲು ಕುಡಿಯುವಾಗ ಅಥವಾ ಕುಡಿದ ತಕ್ಷಣವೇ ಯಾವುದೇ ಹುಳಿ ಪದಾರ್ಥಗಳನ್ನು ತಿನ್ನಬಾರದು. ಕಿತ್ತಳೆ, ದ್ರಾಕ್ಷಿ ಅಥವಾ ನಿಂಬೆಯಂತಹ ಹುಳಿ ಹಣ್ಣುಗಳೊಂದಿಗೆ ಹಾಲನ್ನು ಸೇವಿಸಬಾರದು. ಮೂಲಂಗಿ ತಿಂದ ತಕ್ಷಣ ಕೂಡ ಹಾಲು ಕುಡಿಯಬೇಡಿ. ಇದರಿಂದ ಚರ್ಮ ಸಂಬಂಧಿ ಕಾಯಿಲೆಗಳು ಬರುತ್ತವೆ.

ಮೊಸರು

ಹಾಲು ಮತ್ತು ಮೊಸರು ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ನೀವು ಎರಡೂ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು. ಹಾಲು ಮತ್ತು ಮೊಸರನ್ನು ಒಟ್ಟಿಗೆ ಸೇವಿಸುವುದರಿಂದ ದೇಹಕ್ಕೆ ಹಾನಿಯಾಗುತ್ತದೆ. ಎರಡು ಆಹಾರ ಸೇವನೆ ನಡುವೆ ಸುಮಾರು 4-5 ಗಂಟೆಗಳ ಅಂತರವಿರಬೇಕು.

ಮೀನು

ಹಾಲಿನೊಂದಿಗೆ ಮೀನನ್ನು ಸೇವಿಸುವುದು ಹಾನಿಕಾರಕ ಎಂದು ಹೆಚ್ಚಿನ ಜನರಿಗೆ ತಿಳಿದಿದೆ. ಎರಡು ಆಹಾರ ಪದಾರ್ಥಗಳ ನಡುವೆ ಸ್ವಲ್ಪ ಸಮಯ ತೆಗೆದುಕೊಳ್ಳಬೇಕು.

ಹಾಗಲಕಾಯಿ

ಹಾಗಲಕಾಯಿ ಮತ್ತು ಹಲಸಿನ ಹಣ್ಣುಗಳನ್ನು ಸೇವಿಸಿದ ತಕ್ಷಣ ಹಾಲು ಕುಡಿದರೆ ದೇಹದಲ್ಲಿ ರಿಂಗ್ ವರ್ಮ್, ತುರಿಕೆ, ಎಸ್ಜಿಮಾ ಮುಂತಾದ ಚರ್ಮದ ಸೋಂಕುಗಳು ಉಂಟಾಗಬಹುದು.

ಕಲ್ಲಂಗಡಿ

ನೀವು ಹಣ್ಣುಗಳೊಂದಿಗೆ ಸಹ ಹಾಲನ್ನು ಸೇವಿಸಬಾರದು. ಅದರಲ್ಲೂ ಕಲ್ಲಂಗಡಿ ಜೊತೆ ಹಾಲು ಕುಡಿಯಬೇಡಿ. ಇದು ದೇಹಕ್ಕೆ ಹಾನಿಯುಂಟು ಮಾಡಬಹುದು.

ಸೂಚನೆ:

ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story