ಆರೋಗ್ಯಕ್ಕೆ ಲಾಭ ಮಾತ್ರವಲ್ಲ ನಷ್ಟವನ್ನೂ ನೀಡುತ್ತದೆ ಪೇರಳೆ

ಪೇರಳೆ ಅಡ್ಡ ಪರಿಣಾಮ

ಮ್ಯಾಂಗನೀಸ್, ಪೊಟ್ಯಾಶಿಯಂ, ವಿಟಮಿನ್ ಸಿ, ಲೈಕೊಪಿನ್, ಫೈಬರ್ ಅಂಶಗಳು ಪೇರಳೆಯಲ್ಲಿ ಹೇರಳವಾಗಿ ಕಂಡು ಬರುತ್ತದೆ. ಈ ಹಣ್ಣಿನ ಅತಿಯಾದ ಸೇವನೆ ಒಳ್ಳೆಯದಲ್ಲ.

ಶೀತ ಕೆಮ್ಮು

ಪೇರಳೆ ಹಣ್ಣನ್ನು ಅತಿಯಾಗಿ ಸೇವಿಸುವುದರಿಂದ ಶೀತ, ಕೆಮ್ಮಿನಥಹ ಸಮಸ್ಯೆಗಳು ಉಂಟಾಗುತ್ತದೆ.

ಉದರದ ಸಮಸ್ಯೆ

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಾದ ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು, ವಾಯು ಮುಂತಾದ ಸಮಸ್ಯೆಗಳನ್ನು ತಂದೊಡುತ್ತದೆ.

ಜೀರ್ಣಕ್ರಿಯೆ ಸಮಸ್ಯೆ

ನಾರಿನಂಶ ಅಧಿಕವಾಗಿರುವ ಪೇರಳೆಯಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆಯಾದರೂ ಅತಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಕೂಡಾ ಉಂಟಾಗುತ್ತದೆ.

ಎಚ್ಚರವಿರಲಿ

ಗರ್ಭಾವಸ್ಥೆಯಲ್ಲಿ ಪೇರಳೆ ಸೇವನೆ ಬಗ್ಗೆ ಎಚ್ಚರ ವಹಿಸಬೇಕು.

ಜೀರ್ಣಕ್ರಿಯೆ ಸಮಸ್ಯೆ

ಹಾಲುಣಿಸುವ ಮಹಿಳೆಯರು ಪೇರಳೆ ಸೇವನೆಯನ್ನು ನಿಯಂತ್ರಿಸಬೇಕು. ಇದು ಮಗುವಿನಲ್ಲಿ ಜೀರ್ಣಕ್ರಿಯೆ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಸೀಮಿತ ಪ್ರಮಾಣದಲ್ಲಿರಲಿ

ಅತಿಯಾದರೆ ಯಾವುದೂ ಒಳ್ಳೆಯದಲ್ಲ. ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು.


ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story