ಹಲ್ಲುಗಳು ಹಳದಿಯಾಗಿದ್ದರೆ ಇದು ಸೌಂದರ್ಯಕ್ಕೆ ಮಾರಕವಷ್ಟೇ ಅಲ್ಲ, ವ್ಯಕ್ತಿಯ ಆತ್ಮವಿಶ್ವಾಸವನ್ನೂ ಸಹ ಕುಂದಿಸುತ್ತದೆ. ಮಾತ್ರವಲ್ಲ, ಇದು ಹಲವು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಆದರೆ, ಕೆಲವು ಮನೆಮದ್ದುಗಳ ಸಹಾಯದಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು.
ನಿಂಬೆರಸದಲ್ಲಿ ಸ್ವಲ್ಪ ಸಾಸಿವೆ ಎಣ್ಣೆ, ಉಪ್ಪು ಬೆರೆಸಿ ಹಲ್ಲುಜ್ಜುವುದರಿಂದ ಹಳದಿ ಹಲ್ಲು ಕೆಲವೇ ಕ್ಷಣಗಳಲ್ಲಿ ಬೆಳ್ಳಗಾಗುತ್ತವೆ.
ಬಾಳೆ ಹಣ್ಣಿನ ಸಿಪ್ಪೆಯ ಒಳಭಾಗದಿಂದ ಹಲ್ಲುಜ್ಜಿ ನಂತರ ಉಗುರು ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸುವುದರಿಂದ ಹಲ್ಲುಗಳು ಫಳ ಫಳ ಹೊಳೆಯುತ್ತವೆ.
ಅಡಿಗೆ ಸೋಡಾ ಬಳಸಿ ಹಲ್ಲುಜ್ಜುವುದರಿಂದ ಹಳದಿ ಹಲ್ಲುಗಳು ಕೂಡಲೇ ಬೆಳ್ಳಗಾಗುತ್ತವೆ.
ಬಾಳೆ ಹಣ್ಣಿನ ಸಿಪ್ಪೆಯಂತೆ ಕಿತ್ತಳೆ ಸಿಪ್ಪೆಯಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದರಿಂದಲೂ ಫಳ ಫಳ ಹೊಳೆಯುವ ಹಲ್ಲುಗಳನ್ನು ನಿಮ್ಮದಾಗಿಸಬಹುದು.
ಪ್ರತಿದಿನ ಉಪ್ಪಿನಿಂದ ಹಲ್ಲು ಉಜ್ಜುವುದರಿಂದ ಹಲ್ಲು ಹಳದಿಗಟ್ಟುವುದಿಲ್ಲ.
ತುಳಸಿ ಎಲೆಗಳನ್ನು ನೇರವಾಗಿ ಇಲ್ಲವೇ, ಅದರ ಪುಡಿಯಿಂದ ಹಲ್ಲುಗಳನ್ನು ಸ್ವಚ್ಛಗೊಳಿಸುವುದರಿಂದ ಹಲ್ಲುಗಳು ಬಿಳುಪುಗೊಳ್ಳುವುದು ಮಾತ್ರವಲ್ಲ ಇದು ದಂತ ಸಂಬಂಧಿತ ಸಮಸ್ಯೆಗಳಿಂದಲೂ ರಕ್ಷಿಸುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.