ಈ ಕಾಯಿಲೆಗಳಿಗೆ ಮುಕ್ತಿ ನೀಡುತ್ತದೆ ನೆನೆಸಿಟ್ಟ ಒಣ ದ್ರಾಕ್ಷಿ

Ranjitha R K
May 27,2024

ಪೋಷಕ ತತ್ವ

ಐರನ್, ಫೈಬರ್, ವಿಟಮಿನ್ ಗಳಿಂದ ಸಮೃದ್ದವಾಗಿರುವ ಒಣ ದ್ರಾಕ್ಷಿ ಯನ್ನು ನೀರಿನಲ್ಲಿ ನೆನೆಸಿಟ್ಟು ತಿಂದರೆ ಭಾರೀ ಅನುಕೂಲ.

ಜೀರ್ಣಕ್ರಿಯೆ

ನೀರಿನಲ್ಲಿ ನೆನೆಸಿಟ್ಟ ಒಣ ದ್ರಾಕ್ಷಿಯನ್ನು ನೀರಿನ ಸಮೇತ ಸೇವಿಸಿದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದರಲ್ಲಿ ಫೈಬರ್ ಪ್ರಮಾಣ ಹೆಚ್ಚಾಗಿರುತ್ತದೆ.

ರಕ್ತದ ಪ್ರಮಾಣ

ಒಣ ದ್ರಾಕ್ಷಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ. ನೆನೆಸಿಟ್ಟ ಒಣದ್ರಾಕ್ಷಿ ಸೇವನೆಯಿಂದ ರಕ್ತದ ಪ್ರಮಾಣ ಹೆಚ್ಚಾಗುತ್ತದೆ.

ಸದೃಢ ಮೂಳೆ

ಒಣ ದ್ರಾಕ್ಷಿಯಲ್ಲಿ ಕ್ಯಾಲ್ಶಿಯಂ ಪ್ರಮಾಣ ಕೂಡಾ ಅಧಿಕವಾಗಿರುತ್ತದೆ. ನಿತ್ಯ ಇದನ್ನು ನೀರಿನಲ್ಲಿ ನೆನೆಸಿಟ್ಟು ಸೇವಿಸಿದರೆ ಮೂಳೆ ಬಲಗೊಳ್ಳುತ್ತದೆ.

ರಕ್ತದೊತ್ತಡ ನಿಯಂತ್ರಣ

ನೀರಿನಲ್ಲಿ ನೆನೆಸಿಟ್ಟು ಒಣ ದ್ರಾಕ್ಷಿ ಸೇವಿಸಿದರೆ ಬ್ಲಡ್ ಪ್ರೆಶರ್ ನಿಯಂತ್ರಣಕ್ಕೆ ಬರುತ್ತದೆ.

ತೂಕ ನಿಯಂತ್ರಣ

ನಿರ್ದಿಷ್ಟ ಪ್ರಮಾಣದಲ್ಲಿ ನೀರಿನಲ್ಲಿ ನೆನೆಸಿಟ್ಟ ಒಣ ದ್ರಾಕ್ಷಿ ಸೇವಿಸಿದರೆ ತೂಕ ನಿಯಂತ್ರಣದಲ್ಲಿ ಇರುತ್ತದೆ.

ಎನರ್ಜಿಯ ಮೂಲ

ಒಣ ದ್ರಾಕ್ಷಿಯಲ್ಲಿ ಇರುವ ಪೋಷಕ ತತ್ವ ದೇಹಕ್ಕೆ ಶಕ್ತಿ ನೀಡುತ್ತದೆ.

ಬೆಳಗ್ಗೆ ಸೇವಿಸಿ

ನೀರಿನಲ್ಲಿ ನೆನೆಸಿಟ್ಟ ಒಣದ್ರಾಕ್ಷಿಯನ್ನು ಬೆಳಗ್ಗಿನ ಸಮಯದಲ್ಲಿಯೇ ಸೇವಿಸಬೇಕು. ರಾತ್ರಿ ಹೊತ್ತು ಸೇವಿಸಿದರೆ ಶುಗರ್ ಹೆಚ್ಚಾಗುವ ಭಯ ಇರುತ್ತದೆ.


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ

VIEW ALL

Read Next Story