ಊಟಕ್ಕೆ ಮುನ್ನ ಒಂದು ಹಿಡಿ ಈ ಕಾಳು ಸೇವಿಸಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್ !

Ranjitha R K
Jun 18,2025

ಸಂಜೀವಿನಿ

ನಾವು ನಿತ್ಯ ಸೇವಿಸುವ ಕೆಲವು ಆಹಾರಗಳೇ ನಮ್ಮ ಜೀವನದಲ್ಲಿ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.

ಹಿಡಿ ಮೊಳಕೆ ಕಾಳು

ಒಂದು ಹಿಡಿ ಮೊಳಕೆಯೊಡೆದ ಈ ಕಾಳು ಸೇವಿಸಿದರೆ ಸಾಕು ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳುವುದಕ್ಕೂ ಇದು ಸಹಾಯ ಮಾಡುತ್ತದೆ.

ಮೊಳಕೆಯೊಡೆದ ಕಾಳು

ದೇಹ ಮತ್ತು ಮನಸ್ಸು ಆರೋಗ್ಯವಾಗಿರಬೇಕಾದರೆ ಹೆಚ್ಚಿನ ಪರಿಶ್ರಮದ ಅಗತ್ಯವಿಲ್ಲ. ನಾವು ಸೇವಿಸುವ ಆಹಾರವೇ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ನಿತ್ಯ ಮೊಳಕೆಯೊಡೆದ ಈ ಕಾಳನ್ನು ಸೇವಿಸಿದರೆ ಬಹುತೇಕ ಸಮಸ್ಯೆಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ.

ಮೊಳಕೆಯೊಡೆದ ಕಡಲೆಕಾಯಿ

ನಾರಿನಂಶದಿಂದ ಸಮೃದ್ಧವಾಗಿರುವ ಮೊಳಕೆಯೊಡೆದ ಕಡಲೆಕಾಯಿಯನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ಆದರೆ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುತ್ತದೆ.

ಮಧುಮೇಹಿಗಳಿಗೆ ಅಮೃತ

ಮೊಳಕೆಯೊಡೆದ ಕಡಲೆಕಾಯಿ ಮಧುಮೇಹಿಗಳಿಗೆ ಅಮೃತವಿದ್ದಂತೆ. ಇದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಮೆಗ್ನೀಸಿಯಮ್ ಇರುತ್ತದೆ. ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯಕ್ಕೂ ಬೆಸ್ಟ್

ಮೊಳಕೆಯೊಡೆದ ಕಡಲೆಕಾಯಿ ಹೃದಯದ ಆರೋಗ್ಯಕ್ಕೂ ಫೈಬರ್ ಜೊತೆಗೆ, ಇದು ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಸಹ ಹೊಂದಿರುತ್ತದೆ. ಇದು ರಕ್ತದ ಹರಿವನ್ನು ಸ್ಥಿರವಾಗಿರಿಸುತ್ತದೆ.ಕೊಲೆಸ್ಟ್ರಾಲ್ ಮಟ್ಟವನ್ನು ಸಹ ನಿಯಂತ್ರಿಸುತ್ತದೆ. ಇದು ಹೃದಯವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ .

ಬೊಜ್ಜು ಕರಗಿಸುತ್ತದೆ

ಇದರಲ್ಲಿ ಒಮೆಗಾ-6 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಇದು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಳಕೆಯೊಡೆದ ಕಡಲೆಕಾಯಿಯಲ್ಲಿ ಫೋಲೇಟ್ ಮತ್ತು ವಿಟಮಿನ್ ಬಿ ಸಮೃದ್ಧವಾಗಿದೆ.


ಸೂಚನೆ : ಲೇಖನವು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದನ್ನು ಆಧರಿಸಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.

VIEW ALL

Read Next Story