ಸ್ಟ್ರಾಬೆರಿಗಳು ವಿಟಮಿನ್ C, ಮ್ಯಾಂಗನೀಸ್, ಫೋಲೇಟ್ (ವಿಟಮಿನ್ B9) ಮತ್ತು ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದೆ.
ಸ್ಟ್ರಾಬೆರಿ ಸೇವನೆಯಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಪ್ರತಿದಿನ ಸ್ಟ್ರಾಬೆರಿ ಸೇವನೆಯಿಂದ ಮೆದುಳಿನ ಶಕ್ತಿ ಹೆಚ್ಚುತ್ತದೆ.
ಸ್ಟ್ರಾಬೆರಿ ನಿಯಮಿತ ಸೇವನೆಯಿಂದ ಕರುಳು ಮತ್ತು ಗುದನಾಳದ ಉರಿಯೂತವನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ಸ್ಟ್ರಾಬೆರಿಯಲ್ಲಿ ಆಂಟಿಆಕ್ಸಿಡೆಂಟ್ಗಳ ಪ್ರಮಾಣ ಹೆಚ್ಚಿದ್ದು, ಇದರ ಸೇವನೆಯಿಂದ ದೇಹ ಕಾಯಿಲೆ ವಿರೋಧಿ ಶಕ್ತಿ ಪಡೆಯುತ್ತದೆ.
ಸ್ಟ್ರಾಬೆರಿಯಲ್ಲಿರುವ ವಿಟಮಿನ್ C ಕಣ್ಣುಗಳ ಆರೋಗ್ಯಕ್ಕೆ ಉತ್ತಮ.
ಸ್ಟ್ರಾಬೆರಿಯಲ್ಲಿ ಕ್ಯಾನ್ಸರ್ ಕೋಶಗಳನ್ನು ನಾಶಮಾಡುವ ಫ್ಲಾವೊನೈಡ್, ಫೋಲೇಟ್ & ಕೆಮ್ಫೆರೊಲ್ ಅಂಶಗಳಿವೆ.
ಸ್ಟ್ರಾಬೆರಿಯಲ್ಲಿ ಹೃದಯಾಘಾತದ ಅಪಾಯ ಕಡಿಮೆ ಮಾಡುವ ಪೊಟ್ಯಾಸಿಯಂ ಇದ್ದು, ದೇಹವನ್ನು ಸುಸ್ಥಿತಿಯಲ್ಲಿಡಲು ಸಹಕಾರಿ.