ಕಬ್ಬಿನ ರಸವು ರುಚಿಕರವಾದ ಪೋಷಕಾಂಶಗಳಿಂದ ಕೂಡಿರುತ್ತದೆ. ಬೇಸಿಗೆಯಲ್ಲಿ ತಾಜಾ ಕಬ್ಬಿನ ಹಾಲು ಸೇವನೆ ಡಿಹೈಡ್ರೇಷನ್ ತಡೆಯುತ್ತದೆ.
ಕಬ್ಬಿನ ರಸವು ನೈಸರ್ಗಿಕವಾಗಿ ಸಿಹಿಯಾಗಿರುತ್ತದೆ. ವಿಶಿಷ್ಟವಾದ ತಾಜಾ ವಾಸನೆಯನ್ನು ಹೊಂದಿದೆ.
ಒಂದು ಲೋಟ ಕಬ್ಬಿನ ರಸವು ಸುಮಾರು 150 ಕ್ಯಾಲೋರಿಗಳನ್ನು ಹೊಂದಿರುತ್ತದೆ.
ಇದು ವಿಟಮಿನ್ ಬಿ 1, ಬಿ 2, ಬಿ 6, ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.
ಇದರಲ್ಲಿರುವ ಸಕ್ಕರೆ ದೇಹಕ್ಕೆ ತ್ವರಿತ ಶಕ್ತಿ ನೀಡುತ್ತದೆ. ಇದರಲ್ಲಿರುವ ಪೊಟ್ಯಾಶಿಯಂ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
ಇದರಲ್ಲಿರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಕಬ್ಬಿನ ಹಾಲಿನಲ್ಲಿರುವ ಕಬ್ಬಿಣಾಂಶವು ರಕ್ತಹೀನತೆಯನ್ನು ತಡೆಯುತ್ತದೆ.
ಕಬ್ಬಿನ ಹಾಲು ಆ್ಯಂಟಿಆಕ್ಸಿಡೆಂಟ್ ಗಳು ಚರ್ಮಕ್ಕೆ ಒಳ್ಳೆಯದು. ಕಬ್ಬಿನ ರಸವು ಹಸಿವನ್ನು ನಿಗ್ರಹಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಕಬ್ಬಿನ ರಸವು ತುಂಬಾ ಸಿಹಿಯಾಗಿರುವುದರಿಂದ, ಮಧುಮೇಹ ಇರುವವರು ಇದನ್ನು ಕಡಿಮೆ ಪ್ರಮಾಣದಲ್ಲಿ ಮಾತ್ರ ಕುಡಿಯಬೇಕು.