ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಬಿ6, ಇ, ಮೆಗ್ನೀಸಿಯಮ್, ತಾಮ್ರ ಸೇರಿದಂತೆ ಹಲವು ಪೋಷಕಾಂಶಗಳು ಕಂಡು ಬರುತ್ತವೆ.
ಸೂರ್ಯಕಾಂತಿ ಬೀಜದಲ್ಲಿರುವ ವಿಟಮಿನ್ ಇ, ಸಿ ಹೃದಯದ ಕಾಯಿಲೆಗಳಿಂದ ದೂರ ಉಳಿಸಲು ಸಹಾಯಕವಾಗಿದೆ.
ಸೂರ್ಯಕಾಂತಿ ಬೀಜಾವು ಮೊನೊ ಮತ್ತು ಪಾಲಿ ಅನ್ ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿದ್ದು ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸಲು ಪರಿಣಾಮಕಾರಿ ಆಗಿದೆ.
ಸೂರ್ಯಕಾಂತಿ ಬೀಜದಲ್ಲಿ ಮೆಗ್ನೀಸಿಯಮ್ ಕೂಡ ಇದ್ದು ಇದು ಮೂಳೆಗಳನ್ನು ಬಲಪಡಿಸುತ್ತದೆ.
ಸೂರ್ಯಕಾಂತಿ ಬೀಜಗಳ ಒತ್ತಡ, ಮೈಗ್ರೆನ್ ನಂತಹ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಇದು ಮೆದುಳನ್ನು ಶಾಂತವಾಗಿರಿಸುವಲ್ಲಿ ಪರಿಣಾಮಕಾರಿ ಆಗಿದೆ.
ಸೂರ್ಯಕಾಂತಿ ಬೀಜವು ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ, ಸೆಲೆನಿಯಮ್, ತಾಮ್ರದ ಅಂಶಗಳನ್ನು ಒಳಗೊಂಡಿದ್ದು ಕ್ಯಾನ್ಸರ್ ತಡೆಗಟ್ಟುವಿಕೆಯಲ್ಲಿ ಪರಿಣಾಮಕಾರಿ ಎನ್ನಲಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.