ಬೇಸಿಗೆ ತೂಕ ಇಳಿಸಿಕೊಳ್ಳಲು ಸರಿಯಾದ ಸಮಯ. ಏಕೆಂದರೆ ಬೇಸಿಗೆಯಲ್ಲಿ ನಾವು ಮಾಡುವ ಸಣ್ಣಪುಟ್ಟ ಕೆಲಸಗಳೂ ತೂಕ ಇಳಿಸಲು ಸಹಾಯ ಮಾಡುತ್ತದೆ. ಬೇಸಿಗೆಯಲ್ಲಿ ತೂಕವನ್ನು ಕಳೆದುಕೊಳ್ಳಲು ಹೆಚ್ಚು ಶ್ರಮ ಪಡುವ ಅಗತ್ಯವೂ ಇಲ್ಲ.
ಈ ಪಾನೀಯಗಳನ್ನು ಸೇವಿಸುವ ಮೂಲಕ ಯಾವುದೇ ರೀತಿಯ ಅಡ್ಡ ಪರಿಣಾಮಗಳಿಲ್ಲದೆ ತೂಕವನ್ನು ಕಳೆದುಕೊಳ್ಳಬಹುದು
ನೀವು ಫಿಟ್ ಆಗಿರಬೇಕಾದರೆ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಬೇಕು. ಗ್ರೀನ್ ಟೀ ತೂಕ ಇಳಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ.
ಎರಡು ನಿಂಬೆಹಣ್ಣಿನ ರಸವನ್ನು ತೆಗೆದುಕೊಂಡು, ರಸ ತೆಗೆದ ನಿಂಬೆಯನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ. ಇದಕ್ಕೆ ಅರ್ಧ ಚಮಚ ಕರಿಮೆಣಸಿನ ಪುಡಿ ಮತ್ತು ಒಂದು ಇಂಚು ಶುಂಠಿ ಸೇರಿಸಿ 5 ನಿಮಿಷ ಕುದಿಸಿ. ನಂತರ ಅದನ್ನು ತಣ್ಣಗಾಗಿಸಿ ಫಿಲ್ಟರ್ ಮಾಡಿ . ಹೀಗೆ ಫಿಲ್ಟರ್ ಮಾಡಿದ ನೀರಿಗೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಬೊಜ್ಜನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಈ ಪಾನೀಯವನ್ನು ತಯಾರಿಸಲು, ಒಂದು ಲೀಟರ್ ನೀರಿನಲ್ಲಿ 3 ಚಮಚ ಜೀರಿಗೆ ಮತ್ತು 3 ಇಂಚು ಚಕ್ಕೆ ಸೇರಿಸಿ. ಈಗ ಈ ನೀರನ್ನು 5 ನಿಮಿಷಗಳ ಕಾಲ ಕುದಿಸಿ. ಇದಕ್ಕೆ ಜೇನುತುಪ್ಪ ಮತ್ತು ನಿಂಬೆ ಸೇರಿಸಿ ಮತ್ತು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಒಂದು ಲೋಟ ನೀರಿನಲ್ಲಿ ಒಂದು ಚಮಚ ಸೋಂಪನ್ನು ಬೆರೆಸಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಫಿಲ್ಟರ್ ಮಾಡಿ ಆ ನೀರನ್ನು ಕುಡಿಯಿರಿ.
2 ಟೀ ಚಮಚ ಚಿಯಾ ಬೀಜಗಳನ್ನು ಒಂದು ಕಪ್ ನೀರಿನಲ್ಲಿ ಹಾಕಿ 10 ನಿಮಿಷಗಳ ಕಾಲ ನೆನೆಸಿಡಿ. ಅದರ ನಂತರ ಇನ್ನೂ ಎರಡು ಕಪ್ ನೀರು ಸೇರಿಸಿ . ಜೇನುತುಪ್ಪ ಮತ್ತು ನಿಂಬೆ ರಸವನ್ನು ಆ ನೀರಿಗೆ ಸೇರಿಸಿ. ಈ ನೀರನ್ನು ನಿತ್ಯ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾ ಬಂದರೆ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಕುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಚಯಾಪಚಯವನ್ನು ಚುರುಕಾಗುತ್ತದೆ. ಚಯಾಪಚಯ ಸರಿಯಾಗಿದ್ದರೆ ತೂಕವನ್ನು ಕಳೆದುಕೊಳ್ಳುವುದು ಸುಲಭವಾಗುತ್ತದೆ.