ಡಿಜಿಟಲ್ ಯುಗದಲ್ಲಿ ಮೊಬೈಲ್ ಕಂಪ್ಯೂಟರ್, ಲ್ಯಾಪ್ ಟಾಪ್ ಬಳಕೆ ಗಣನೀಯವಾಗಿ ಹೆಚ್ಚಿದೆ. ಇದು ಕಣ್ಣಿನ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
ಗ್ಯಾಜೆಟ್ ಗಳ ಪರದೆಯ ಬೆಳಕು ಬಹಳ ತೀಕ್ಷ್ಣವಾಗಿರುತ್ತದೆ. ಈ ಕಾರಣದಿಂದ ಕಣ್ಣುಗಳು ದುರ್ಬಲಗೊಳ್ಳುತ್ತವೆ.
ಕಣ್ಣಿನ ಆರೋಗ್ಯ ಕಾಪಾಡಲು ದೃಷ್ಟಿ ಹೆಚ್ಚಿಸಲು ನಾವು ಸೇವಿಸುವ ಆಹಾರಕ್ಕೆ ಆದ್ಯತೆ ನೀಡಬೇಕು .
ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿ ಕಣ್ಣಿನ ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ.
ಹಸಿರು ತರಕಾರಿಗಳಲ್ಲಿನ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ ಮತ್ತು ಲುಟಿನ್ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಅವಕಾಡೋದಲ್ಲಿ ವಿಟಮಿನ್ ಇ ಸಮೃದ್ದವಾಗಿರುತ್ತದೆ. ಇದು ಕಣ್ಣಿನ ರೆಟಿನಾವನ್ನು ಆರೋಗ್ಯವಾಗಿಡುತ್ತದೆ.
ಕ್ಯಾರೆಟ್ ನಲ್ಲಿರುವ ಬಿಟಾ ಕೆರಟಿನ್ ಮತ್ತು ವಿಟಮಿನ್ ಎ ದೃಷ್ಟಿಯನ್ನು ತೀಕ್ಷ್ಣಗೊಳಿಸುತ್ತದೆ.
ಮೀನಿನಲ್ಲಿರುವ ಡಿಎಚ್ಎ ರೆಟಿನಾವನ್ನು ಬಲಪಡಿಸುತ್ತದೆ.
ವಿಟಮಿನ್ ಸಿ ಮತ್ತು ಸಿಟ್ರೆಸ್ ನಿಂದ ಸಮೃದ್ದವಾಗಿರುವ ಕಿತ್ತಳೆ, ನಿಂಬೆ ದ್ರಾಕ್ಷಿ ದೃಷ್ಟಿಯನ್ನು ಸುಧಾರಿಸುತ್ತದೆ.
ಬಾದಾಮಿ ಮತ್ತು ವಾಲ್ ನಟ್ನಂಥಹ ಒಣ ಹಣ್ಣುಗಳು ದೃಷ್ಟಿಯನ್ನು ಸುಧಾರಿಸುತ್ತದೆ.