ಮೂತ್ರ ಪಿಂಡ ಸರಿಯಾಗಿ ಫಿಲ್ಟರ್ ಕೆಲಸ ಮಾಡಲು ಸಾಧ್ಯವಾಗದೆ ಕಲ್ಮಶವನ್ನು ದೇಹದಿಂದ ಹೊರ ಹಾಕದಿದ್ದಾಗ ಯೂರಿಕ್ ಆಸಿಡ್ ಸಮಸ್ಯೆ ಉಂಟಾಗುತ್ತದೆ.
ಶರೀರದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದಾಗ ಕೀಲುಗಳಲ್ಲಿ ಊತ ಮತ್ತು ನೋವು ಕಾಣಿಸಿಕೊಳ್ಳುತ್ತದೆ.
ಯೂರಿಕ್ ಆಸಿಡ್ ಸಮಸ್ಯೆಯನ್ನು ನಿವಾರಿಸಲು ಕೆಲವು ಹಣ್ಣುಗಳ ಸೇವನೆ ಸಹಾಯ ಮಾಡುತ್ತದೆ.
ಜಾಮೂನ್ ನಲ್ಲಿ ಕಂಡು ಬರುವ ಆಂಟಿ ಆಕ್ಸಿಡೆಂಟ್ ಮೆಟಬಾಲಿಸಂ ಅನ್ನು ಬಲಪಡಿಸುತ್ತದೆ. ಇದು ಯೂರಿಕ್ ಆಸಿಡ್ ಅನ್ನು ಕಂಟ್ರೋಲ್ ಮಾಡುವಲ್ಲಿ ಸಹಾಯ ಮಾಡುತ್ತದೆ.
ಬಾಳೆಹಣ್ಣಿನಲ್ಲಿ ಫ್ಯೂರಿನ್ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದರಲ್ಲಿ ವಿಟಮಿನ್ ಸಿಯು ಅಡಗಿರುತ್ತದೆ. ಇದು ಯೂರಿಕ್ ಆಸಿಡ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಿತ್ತಳೆಯಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದರ ಸೇವನೆಯಿಂದ ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಬರುತ್ತದೆ.
ಚೆರಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ ೬, ಪೊಟ್ಯಾಷಿಯಂ, ಮತ್ತು ಐರನ್ ಕಂಡು ಬರುತ್ತದೆ. ಇದು ಯೂರಿಕ್ ಆಸಿಡ್ ಅನ್ನು ಹತೋಟಿಯಲ್ಲಿ ಇಡಲು ಸಹಾಯ ಮಾಡುತ್ತದೆ.
ಸೇಬು ಸೇವನೆಯಿಂದಲೂ ಯೂರಿಕ್ ಆಸಿಡ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.