ಉತ್ತಮ ರಿಫ್ರೆಷಿಂಗ್ ತರಕಾರಿ ಆಗಿರುವ ಸೌತೆಕಾಯಿಯಲ್ಲಿ ಶೇ. 96ರಷ್ಟು ನೀರಿನ ಅಂಶವಿದ್ದು ಇದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಬೇಸಿಗೆಯಲ್ಲಿ ಪ್ರತಿದಿನ ತಪ್ಪದೆ ಸೌತೆಕಾಯಿ ತಿನ್ನುವುದರಿಂದ ಇದು ದೇಹವನ್ನು ಆಯಾಸ, ಮಲಬದ್ಧತೆ, ನಿರ್ಜಲೀಕರಣದಂತಹ ಸಮಸ್ಯೆಗಳಿಂದ ರಕ್ಷಿಸುತ್ತದೆ.
ಕಡಿಮೆ ಕ್ಯಾಲೋರಿ, ಉತ್ತಮ ನೀರಿನಾಂಶ ಹೊಂದಿರುವ ಸೌತೆಕಾಯಿ ಸೇವನೆಯು ಅತಿಯಾಗಿ ತಿನ್ನುವ ಕಡುಬಯಕೆಯನ್ನು ತಪ್ಪಿಸಿ ತೂಕ ಇಳಿಕೆಗೆ ನೆರವಾಗುತ್ತದೆ.
ಕರಗದ ಹಾಗೂ ಕರಗಬಲ್ಲ ಫೈಬರ್‌ಗಳಿಂದ ಹಾಗೂ ಆರೋಗ್ಯಕರ ಕಿಣ್ವಗಳಿಂದ ಸಮೃದ್ಧವಾಗಿರುವ ಸೌತೆಕಾಯಿ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ.
ಸೌತೆಕಾಯಿಯಲ್ಲಿ ವಿಟಮಿನ್ ಎ, ಸಿ, ಕೆ ಹೇರಳವಾಗಿರುವುದರಿಂದ ಇರದ ಸೇವನೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಸೌತೆಕಾಯಿ ತಿನ್ನುವುದರಿಂದ ಸುಲಭವಾಗಿ ಬಿಪಿಯನ್ನು ನಿಯಂತ್ರಿಸಬಹುದು.
ಮಧುಮೇಹಸಮಸ್ಯೆ ಇರುವವರಿಗೂ ಕೂಡ ಸೌತೆಕಾಯಿ ಒಂದು ಸೂಪರ್ ಫುಡ್ ಎಂತಲೇ ಹೇಳಲಾಗುತ್ತದೆ.
ಸೌತೆಕಾಯಿ ಸೇವನೆಯು ಚರ್ಮವನ್ನು ಹೈಡ್ರೇಟ್ ಆಗಿರಿಸುವುದರ ಜೊತೆಗೆ ಚರ್ಮವನ್ನು ಕಾಂತಿಯುತವಾಗಿರಿಸುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.