ಈ ಸ್ವೀಟ್ ಅನ್ನು ಎಷ್ಟೇ ತಿಂದರೂ ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ!

Ranjitha R K
Dec 03,2024

ಮಧುಮೇಹ ರೋಗಿಗಳಿಗೆ ಸಿಹಿ

ಮಧುಮೇಹ ರೋಗಿಗಳು ಸಿಹಿ ತಿಂಡಿ ಸೇವಿಸುವುದು ಸಾಧ್ಯವಾಗುವುದಿಲ್ಲ. ಸಿಹಿ ತಿಂದರೆ ಈ ಕಾಯಿಲೆ ಹೆಚ್ಚಾಗುವ ಅಪಾಯ ಇರುತ್ತದೆ.

ಮಧುಮೇಹ ರೋಗಿಗಳಿಗೆ ಸಿಹಿ

ಸಿಹಿತಿಂಡಿಗಳನ್ನು ಬುದ್ಧಿವಂತಿಕೆಯಿಂದ ಆರಿಸಿದರೆ, ಮಧುಮೇಹದ ಹೊರತಾಗಿಯೂ ಹಬ್ಬವನ್ನು ಪೂರ್ಣವಾಗಿ ಆನಂದಿಸಬಹುದು.

ಮಧುಮೇಹ ರೋಗಿಗಳಿಗೆ ಸಿಹಿ

ಮಧುಮೇಹ ರೋಗಿಗಳಿಗೆ ಸಂಪೂರ್ಣವಾಗಿ ಸುರಕ್ಷಿತ ಮತ್ತು ಆರೋಗ್ಯಕರವಾಗಿರುವಂಥಹ ಸಿಹಿತಿಂಡಿಗಳು ಯಾವುವು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಬಾದಾಮಿ-ಅಂಜೂರದ ಬರ್ಫಿ :

ಬಾದಾಮಿ ಮತ್ತು ಅಂಜೂರದ ಬರ್ಫಿ ಪೌಷ್ಟಿಕಾಂಶ-ಭರಿತ ಸಿಹಿಯಾಗಿದ್ದು, ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ನೈಸರ್ಗಿಕ ಸಿಹಿಯನ್ನು ಹೋದಿರುತ್ತದೆ. ಹಾಗಾಗಿ ಇದನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದಿಲ್ಲ.

ತೆಂಗಿನಕಾಯಿ ಲಡ್ಡು

ತೆಂಗಿನಕಾಯಿಯಿಂದ ಮಾಡಿದ ಲಡ್ಡು ಮಧುಮೇಹ ರೋಗಿಗಳಿಗೂ ಸುರಕ್ಷಿತವಾಗಿದೆ.ಇದನ್ನು ಸಿಹಿಗೊಳಿಸಲು ಸಕ್ಕರೆಯ ಬದಲಿಗೆ ಖರ್ಜೂರವನ್ನು ಬಳಸಬಹುದು.

ಡ್ರೈ ಫ್ರುಟ್ ಚಾಕೊಲೇಟ್

ಡಾರ್ಕ್ ಚಾಕೊಲೇಟ್ ಕಡಿಮೆ ಸಕ್ಕರೆಯನ್ನು ಹೊಂದಿದ್ದು, ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಅದನ್ನು ವಾಲ್‌ನಟ್, ಗೋಡಂಬಿ ಮತ್ತು ಬಾದಾಮಿಯೊಂದಿಗೆ ಬೆರೆಸಿ ಆರೋಗ್ಯಕರವಾಗಿ ಮಾಡಬಹುದು.

ರಾಗಿ ಹಲ್ವಾ :

ಜೋಳ ಮತ್ತು ಬಜ್ರಾ ಹಲ್ವಾ ಪೌಷ್ಟಿಕಾಂಶದ ಸಿಹಿಯಾಗಿದ್ದು, ಇದನ್ನು ಸಕ್ಕರೆಯ ಬದಲಿಗೆ ಬೆಲ್ಲ ಅಥವಾ ಖರ್ಜೂರದೊಂದಿಗೆ ಸಿಹಿಗೊಳಿಸಬಹುದು.

ಹಣ್ಣಿನ ಚಾಟ್

ಹಣ್ಣುಗಳಿಂದ ತಯಾರಿಸಿದ ಚಾಟ್ ಸಿಹಿತಿಂಡಿಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ. ಇದು ನೈಸರ್ಗಿಕ ಮಾಧುರ್ಯ ಮತ್ತು ಫೈಬರ್ ನ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡುತ್ತದೆ.


ಸೂಚನೆ :ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಬರೆಯುವಾಗ ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ತೆಗೆದುಕೊಂಡಿದ್ದೇವೆ. ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

VIEW ALL

Read Next Story