ಬೀಟ್ ರೂಟ್ ವಿವಿಧ ರೀತಿಯ ಅಡುಗೆಯಲ್ಲಿ ಬಳಸಲಾಗುತ್ತದೆ. ಆದರೆ ಅದರ ಸಿಪ್ಪೆಯನ್ನು ಎಸೆಯುತ್ತಾರೆ. ಬೀಟ್ ರೂಟ್ ಸಿಪ್ಪೆಯನ್ನು ಎಸೆಯುವ ಬದಲು ಈ ರೀತಿ ಬಳಸಿ ನೋಡಿ.
ಬೀಟ್ ರೂಟ್ ಸಿಪ್ಪೆಯಿಂದ ಕಬಾಬ್ ತಯಾರಿಸಬಹುದು. ಬೀಟ್ ರೂಟ್ ಜೊತೆಗೆ ಅದರ ಸಿಪ್ಪೆಯನ್ನು ಕೂಡಾ ಗ್ರೇಟ್ ಮಾಡಿಕೊಳ್ಳಿ. ನಂತರ ಇದಕ್ಕೆ ಕಬಾಬ್ ತಯಾರಿಸಿಕೊಳ್ಳಲು ಕ್ಬಾಬ ಮಸಾಲ ಹಾಕಿ. ಈಗ ಉಂಡೆಗಳನ್ನಾಗಿ ಮಾಡಿಕೊಂಡು ಕರಿಯಿರಿ.
ಬೀಟ್ ರೂಟ್ ಬಳಸಿ ಹಲ್ವಾ ಮಾಡುತ್ತಾರೆ. ಆದರೆ ಬೀಟ್ ರೂಟ್ ಸಿಪ್ಪೆ ಬಳಸಿಕೊಂಡು ಕೂಡಾ ಹಲ್ವಾ ತಯಾರಿಸಬಹುದು. ಇದಕ್ಕಾಗಿ 4-5 ಬೀಟ್ ರೂಟ್ ಗಳ ಸಿಪ್ಪೆಯ ಅಗತ್ಯವಿರುತ್ತದೆ.
ಸಲಾಡ್ ಗೆ ಬೀಟ್ ರೂಟ್ ಹಾಕುವಾಗ ಅದನ್ನು ಸಿಪ್ಪೆ ಸಮೇತ ಬಳಸಿ. ಪ್ರತಿ ಬಾರಿ ಸಿಪ್ಪೆ ತೆಗೆದೇ ಬೀಟ್ ರೂಟ್ ಬಳಸಬೇಕೆಂದಿಲ್ಲ.
ಚಳಿಗಾಲದಲ್ಲಿ ಬೀಟ್ ರೂಟ್ ಜ್ಯೂಸ್ ಅನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಹೀಗೆ ಜ್ಯೂಸ್ ತಯಾರಿಸುವಾಗ ಬೀಟ್ ರೂಟ್ ಸಿಪ್ಪೆಯನ್ನು ಕೂಡಾ ಬಳಸಿ.
ಬೀಟ್ ರೂಟ್ ಸಿಪ್ಪೆಯಿಂದ ಚಟ್ ಪಟಾ ಸಾಸ್ ತಯಾರಿಸಬಹುದು. ಒಂದು ಕಪ್ ಬೀಟ್ ರೂಟ್ ಸಿಪ್ಪೆ ಮತ್ತು ಒಂದು ಬೀಟ್ ರೂಟ್ ಅನ್ನು ಒಂದು ಪ್ಯಾನ್ ನಲ್ಲಿ ಹಾಯ್ ಬೇಯಿಸಿಕೊಳ್ಳಿ. ಅದಕ್ಕೆ ಉಪ್ಪು, ನಿಂಬೆ, ಶುಂಟಿ, ಜೀರಿಗೆ ಸೇರಿಸಿ ರುಬ್ಬಿಕೊಳ್ಳಿ. ಸಾಸ್ ತಯಾರಾಗುತ್ತದೆ.
ಬೀಟ್ ರೂಟ್ ಸಿಪ್ಪೆಯನ್ನು ಬೇಕಿಂಗ್ ಟ್ರೇಯಲ್ಲಿ ಹಾಕಿ. ಅದಕ್ಕೆ ಉಪ್ಪು, ಕರಿ ಮೆಣಸು, ಆಲಿವ್ ಆಯಿಲ್ ಅನ್ನು ಸೇರಿಸಿ. ನಂತರ 350 ಡಿಗ್ರಿ ಪ್ರಿ ಹೀಟ್ ಓವನ್ ನಲ್ಲಿ 15 ನಿಮಿಷಗಳವೆರೆಗ್ ಬೇಕ್ ಮಾಡಿ.
ಬೀಟ್ ರೂಟ್ ನಲ್ಲಿ ವಿಟಮಿನ್, ಖನಿಜ, ಸಮೃದ್ದವಾಗಿರುತ್ತದೆ. ಇದು ಕಡಿಮೆ ಕ್ಯಾಲೋರಿಯನ್ನು ಕೂಡಾ ಹೊಂದಿರುತ್ತದೆ. ಮ್ಯಾಂಗನೀಸ್ ಮತ್ತು ಕಾಪರ್ ನಂಥಹ ಪ್ರಮುಖ ಪೋಷಕ ತತ್ವಗಳಿಂದ ತುಂಬಿರುತ್ತದೆ. ಇದು ಬ್ಲಡ್ ಪ್ರೆಶರ್ ನಿಯಂತ್ರಣಕ್ಕೆ ಸಹಕಾರಿ.