ಇತ್ತೀಚಿನ ಜೀವನ ಶೈಲಿ ಹಾಗೂ ಆಹಾರದ ಕಾರಣದಿಂದಾಗಿ ಜನರಲ್ಲಿ ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತಿದೆ.
ಹೊಟ್ಟೆಯನ್ನು ಕರಗಿಸಲು ಜನರು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಆದರೆ, ಯಾವುದೇ ಕಸರತ್ತು ಇಲ್ಲದೆ, ಜಸ್ಟ್ ಟೀ ಕುಡಿದು ಹೊಟ್ಟೆಯ ಬೊಜ್ಜನ್ನು ಕರಗಿಸಬಹುದು.
ಹೆಚ್ಚಾದ ಟೀ ಸೇವನೆಯೂ ನಮ್ಮ ದೇಹಕ್ಕೆ ಒಳ್ಳೆಯದಲ್ಲ ಆದರೆ, ಆರೋಗ್ಯಕರವಾದ ಟೀ ಸೇವಿಸುವುದರಿಂದ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಕೇವಲ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಅಷ್ಟೆ ಅಲ್ಲದೆ, ನಿಮ್ಮ ಹೊಟ್ಟೆಯ ಬೊಜ್ಜನ್ನು ಕೂಡ ಕರಗಿಸಬಹುದು.
ಪುದಿನಾ ಮತ್ತು ಜೇನು ತುಪ್ಪವನ್ನು ಬೆರಸಿ ಟೀ ಮಾಡಿ ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ.
ಬಿಸಿ ನೀರಿಗೆ ಸ್ವಲ್ಪ ಜೇನು ತುಪ್ಪ ಹಾಗೂ ಪುದಿನ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿ ಈ ನೀರನ್ನು ಸೋಸಿ ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ.
ಶುಂಠಿಯನ್ನು ಚೆನ್ನಾಗಿ ಜಜ್ಜಿ ಬಿಸಿ ನೀರಿನಲ್ಲಿ ಹಾಕಿ ಟೀ ಮಾಡಿ ಸೇವಿಸುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.
ನೀರಿಗೆ ದಾಲ್ಚಿನ್ನಿ ಹಾಕಿ ಚೆನ್ನಾಗಿ ಕುದಿಸಿ ಇದಕ್ಕೆ ಸ್ವಲ್ಪ ಜೇನು ತುಪ್ಪ ಬೆರಸಿ ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ.